ADVERTISEMENT

ಟಿಕ್‌ಟಾಕ್ ಸೇರಿ ಚೀನಾದ ಹಲವು ಆ್ಯಪ್‌ಗಳ ನಿಷೇಧಕ್ಕೆ ಅಮೆರಿಕ ಚಿಂತನೆ: ಪಾಂಪಿಯೊ

ಏಜೆನ್ಸೀಸ್
Published 7 ಜುಲೈ 2020, 15:39 IST
Last Updated 7 ಜುಲೈ 2020, 15:39 IST
ಟಿಕ್‌ಟಾಕ್
ಟಿಕ್‌ಟಾಕ್   
""

ವಾಷಿಂಗ್ಟನ್‌:ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಹೇಳಿದ್ದಾರೆ.

ಮಾಧ್ಯಮದವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ‍ಪಾಂಪಿಯೊ, ಟಿಕ್‌ಟಾಕ್ಬಳಕೆದಾರರ ಮಾಹಿತಿಯನ್ನು ನಿರ್ವಹಿಸುವ ಬಗ್ಗೆ ಹಾಗೂರಾಷ್ಟ್ರೀಯ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘ಚೀನಾದ ಕಮ್ಯುನಿಸ್ಟ್‌ ಪಕ್ಷದಿಂದ ನಿಯಂತ್ರಿಸಲ್ಪಡುವಗುಪ್ತಚರ ಸಂಸ್ಥೆಗಳಿಗೆ ಅಲ್ಲಿನಕಂಪೆನಿಗಳು ಬೆಂಬಲ ಮತ್ತು ಸಹಕಾರ ನೀಡುತ್ತವೆ’ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣ ಹಾಗೂ ಹಾಂಗ್‌ಕಾಂಗ್‌ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾನೂನು ಮತ್ತು ಕೆಲ ವರ್ಷಗಳಿಂದ ನಡೆಯುತ್ತಿರುವ ವಾಣಿಜ್ಯ ಸಮರವು ಅಮೆರಿಕ ಮತ್ತು ಚೀನಾ ನಡುವಣ ದ್ವಿಪಕ್ಷೀಯ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿವೆ. ಈ ಹೊತ್ತಿನಲ್ಲೇ ಪಾಂಪಿಯೊ ಇಂತಹ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ADVERTISEMENT

ಆದರೆ ಚೀನಾದಲ್ಲಿ ಕಾರ್ಯಾಚರಿಸದ ಈ ಆ್ಯಪ್ (ಟಿಕ್‌ಟಾಕ್), ಇತರ ದೇಶಗಳಲ್ಲಿ ಬಳಕೆದಾರರನ್ನುಸೆಳೆಯುವ ಸಲುವಾಗಿ ತಾನು ಚೀನಾದಿಂದ ದೂರವಿರಲು ಪ್ರಯತ್ನಿಸಿರುವುದಾಗಿ ಮತ್ತು ಚೀನಾದಿಂದ ಸ್ವತಂತ್ರವಾಗಿರುವುದಾಗಿ ಒತ್ತಿ ಹೇಳಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ

ಚೀನಾ ಮೂಲದ ಇಂಟರ್ನೆಟ್‌ ತಂತ್ರಜ್ಞಾನ ಕಂಪೆನಿ ಬೈಟ್‌ಡಾನ್ಸ್‌ನ ಸೋಶಿಯಲ್‌ ಮೀಡಿಯಾ ಆ್ಯಪ್‌ ಆಗಿರುವ ಟಿಕ್‌ಟಾಕ್‌ ಸೇರಿಂದಂತೆ ಇನ್ನೂ 58 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಭಾರತ ಇತ್ತೀಚೆಗೆ ನಿಷೇಧಿಸಿತ್ತು.

ಹಾಂಗ್‌ಕಾಂಗ್‌ನಲ್ಲಿಸೇವೆ ಸ್ಥಗಿತ: ಟಿಕ್‌ಟಾಕ್‌

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಿಗಿ ನಿಯಮಗಳನ್ನು ಹೇರಿದ ಕಾರಣ, ಹಾಂಗ್‌ಕಾಂಗ್‌ನಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟಿಕ್‌ಟಾಕ್‌ ಮಂಗಳವಾರ ತಿಳಿಸಿದೆ.

ಚೀನಾ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಗ್‌ಕಾಂಗ್‌ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಇದರಿಂದ ಹಾಂಗ್‌ಕಾಂಗ್‌ ಪ್ರಜೆಗಳ ಚಲನವಲನಗಳ ಮೇಲೆ ಮತ್ತಷ್ಟು ನಿರ್ಬಂಧ ಹೇರಿದಂತಾಗಿದೆ.

ಕಾಯ್ದೆಯಿಂದ ತಮ್ಮ ಸೇವೆಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗಲಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರ ಆಧಾರದ ಮೇಲೆ ಸೇವೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌, ಗೂಗಲ್‌ ಸಹ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.