ADVERTISEMENT

ಎರಡು ವರ್ಷದಿಂದ ಕಾಣೆಯಾಗಿದ್ದ ಮಗು ನೆಲಮಹಡಿಯ ಕೋಣೆಯಲ್ಲಿ ಪತ್ತೆ!

ರಾಯಿಟರ್ಸ್
Published 17 ಫೆಬ್ರುವರಿ 2022, 10:58 IST
Last Updated 17 ಫೆಬ್ರುವರಿ 2022, 10:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನ್ಯೂಯಾರ್ಕ್; ಎರಡು ವರ್ಷಗಳಿಂದ ಕಾಣೆಯಾಗಿದ್ದ 6 ವರ್ಷದ ಹೆಣ್ಣು ಮಗುವೊಂದು ನೆಲಮಹಡಿಯ ಕೋಣೆಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿರುವುದು ವರದಿಯಾಗಿದೆ.

ಪ್ರೀಸ್ಲಿ ಶಲ್ಟಿಸ್ ಎನ್ನುವ ಮಗುವೊಂದು ಎರಡು ವರ್ಷಗಳ ಹಿಂದೆ ಕಾಣೆಯಾಗಿತ್ತು. ಈ ಕುರಿತು ನ್ಯೂಯಾರ್ಕ್ ಪೊಲೀಸ್ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೂ ಮಗು ಪತ್ತೆಯಾಗಿರಲಿಲ್ಲ

ಕಡೆ ಕ್ಷಣ ಪೊಲೀಸರಿಗೆ ಮಗುವಿನ ಚಿಕ್ಕಪ್ಪ ಚಿಕ್ಕಮ್ಮರ ಮೇಲೆ ಅನುಮಾನ ಬಂದು, ಸರ್ಚ್ ವಾರಂಟ್ ತಂದು ಮನೆ ಶೋಧಿಸಿದಾಗ ಮಗು ನೆಲಮಹಡಿಯ ಮೆಟ್ಟಿಲುಗಳ ಬಳಿ ಇದ್ದ ಸಣ್ಣದಾದ ಕೋಣೆಯೊಂದರಲ್ಲಿ ಪತ್ತೆಯಾಗಿದೆ.

ADVERTISEMENT

ಮಗುವನ್ನು ಅಪಹರಿಸಿ ಮುಚ್ಚಿಟ್ಟಿದ್ದ ಕಿಂಬರ್ಲಿ ಹಾಗೂ ಕಿರ್ಕ್ ಶಲ್ಟಿಸ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಗೆ ಮಗುವಾಗದಿದ್ದಕ್ಕೆ ತಮ್ಮ ಸಹೋದರನ ಮಗುವನನ್ನು ಕದ್ದು ಈ ರೀತಿ ಆರೋಪಿಗಳು ಮುಚ್ಚಿಟ್ಟಿದ್ದರು. ಎರಡು ವರ್ಷ ಮಗು ಹೊರಗೆ ಬರದೇ ಹಿಂಸೆ ಅನುಭವಿಸಿದರೂ ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.