ADVERTISEMENT

ಮಾಡರ್ನಾ ಲಸಿಕೆ ಶೇ. 94.1ರಷ್ಟು ಪರಿಣಾಮಕಾರಿ; ಮುಂದಿನ ವಾರ ಬಿಡುಗಡೆಗೆ ಸಿದ್ಧತೆ

ಡೆಕ್ಕನ್ ಹೆರಾಲ್ಡ್
Published 16 ಡಿಸೆಂಬರ್ 2020, 1:14 IST
Last Updated 16 ಡಿಸೆಂಬರ್ 2020, 1:14 IST
ಕೋವಿಡ್ ಲಸಿಕೆ
ಕೋವಿಡ್ ಲಸಿಕೆ   

ನ್ಯೂಯಾರ್ಕ್: ಮಹಾಮಾರಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಲಸಿಕೆ ಸಿದ್ಧತೆಯು ಭರದಿಂದ ಸಾಗುತ್ತಿದೆ. ಈ ಮಧ್ಯೆ ಮಾಡರ್ನಾದ ಕೋವಿಡ್ 19 ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಣ ಘಟಕ ಎಫ್‌ಡಿಎ ಮಂಗಳವಾರ ತಿಳಿಸಿದೆ.

ಇದಕ್ಕೆ ಮುಂದಿನ ದಿನಗಳಲ್ಲಿ ತುರ್ತು ಅನುಮೋದನೆ ಸಿಗಲಿದ್ದು, ಮುಂದಿನ ವಾರದಲ್ಲಿ ಹೊರಬರಲು ಸಿದ್ಧವಾಗಿದೆ ಎಂಬುದು ಉತ್ತಮ ಸಂಕೇತವಾಗಿದೆ ಎಂದು ತಿಳಿಸಿದೆ.

ತುರ್ತು ಬಳಕೆಗೆ ಅನುಮೋದನೆ ನೀಡದಿರಲು ನಿರ್ದಿಷ್ಟ ಕಾರಣಗಳಿಲ್ಲ. ಒಟ್ಟಾರೆ ಮಾಡರ್ನಾ ಲಸಿಕೆಯು ಶೇಕಡಾ 94.1ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಣ ಘಟಕ ಎಫ್‌ಡಿಎ ತಿಳಿಸಿದೆ.

ADVERTISEMENT

ಫೈಜರ್-ಬಯೋಟೆಕ್ ಲಸಿಕೆಯ ವಿತರಣೆಯು ಸೋಮವಾರದಿಂದ ಪ್ರಾರಂಭವಾಗಿದೆ. ಈಗ ಎಫ್‌ಡಿಎ ಗ್ರೀನ್ ಸಿಗ್ನಲ್ ನೀಡಿದರೆ ಮಾಡರ್ನಾದ ಆರು ದಶಲಕ್ಷ ಡೋಸ್‌ಗಳ ವಿತರಣೆಯು ಮುಂದಿನ ವಾರದಿಂದ ಪ್ರಾರಂಭವಾಗಲಿದೆ.

2.5 ಬಿಲಿಯನ್ ಫೆಡರಲ್ ನಿಧಿಯಲ್ಲಿ ಜನವರಿ ತಿಂಗಳಿನಿಂದ ಮಾಡರ್ನಾ ಲಸಿಕೆ ತಯಾರಿಸುವ ಕೆಲಸವನ್ನು ಪ್ರಾರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.