ADVERTISEMENT

ಡೆಲ್ಟಾ ರೂಪಾಂತರದ ವಿರುದ್ಧವೂ ಮೊಡೆರ್ನಾ ಲಸಿಕೆ ಪರಿಣಾಮಕಾರಿ: ವರದಿ

ಡೆಕ್ಕನ್ ಹೆರಾಲ್ಡ್
Published 30 ಜೂನ್ 2021, 7:56 IST
Last Updated 30 ಜೂನ್ 2021, 7:56 IST
ಚಿತ್ರ ಕೃಪೆ – ಎಎಫ್‌ಪಿ
ಚಿತ್ರ ಕೃಪೆ – ಎಎಫ್‌ಪಿ   

ವಾಷಿಂಗ್ಟನ್: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ವಿರುದ್ಧವೂ ಮೊಡೆರ್ನಾ ಲಸಿಕೆ ಪರಿಣಾಮಕಾರಿ ಎಂದು ವರದಿಯಾಗಿದೆ.

ಲಸಿಕೆ ಪಡೆದು ಪ್ರತಿಕಾಯ ಸೃಷ್ಟಿಯಾದವರ ರಕ್ತದ ಮಾದರಿಯನ್ನು ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಈ ವೇಳೆ, ಡೆಲ್ಟಾ ಸೇರಿದಂತೆ ವಿವಿಧ ದೇಶಗಳಲ್ಲಿ ಪತ್ತೆಯಾಗಿರುವ ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಪರೀಕ್ಷೆಗೆ ಒಳಪಡಿಸಿದ ಎಲ್ಲ ರೂಪಾಂತರಿತ ತಳಿಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಲಸಿಕೆಗೆ ಇದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.

ಮೂಲ ಕೊರೊನಾ ವೈರಸ್‌ನ ವಿರುದ್ಧ ಲಸಿಕೆಯು ಸೃಷ್ಟಿಸುವ ಪ್ರತಿಕಾಯಗಳಿಗೆ ಹೋಲಿಸಿದರೆ ಡೆಲ್ಟಾ ತಳಿಯ ವಿರುದ್ಧ ಸೃಷ್ಟಿಸುವ ಪ್ರತಿಕಾಯಗಳ ಪ್ರಮಾಣ 2.1 ಪಟ್ಟು ಕಡಿಮೆ ಇದೆ. ಅದೇ ರೀತಿ, ನೈಜೀರಿಯಾದಲ್ಲಿ ಮತ್ತೆಯಾಗಿರುವ ರೂಪಾಂತರಿತ ತಳಿಯ ವಿರುದ್ಧ ಲಸಿಕೆಯು ಸೃಷ್ಟಿಸುವ ಪ್ರತಿಕಾಯಗಳ ಪ್ರಮಾಣ 4.2 ಪಟ್ಟು ಕಡಿಮೆ ಇದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.