ADVERTISEMENT

ಮೊನಾಲಿಸಾ ನಗು ಸಹಜವಲ್ಲ: ಸಂಶೋಧನೆ

ಪಿಟಿಐ
Published 4 ಜೂನ್ 2019, 19:06 IST
Last Updated 4 ಜೂನ್ 2019, 19:06 IST
ಮೊನಾಲಿಸಾ
ಮೊನಾಲಿಸಾ   

ಲಂಡನ್‌: ಮೊನಾಲಿಸಾ ಅವರದು ಸಹಜವಾದ ನಗು ಅಲ್ಲ ಎಂದು ನರವಿಜ್ಞಾನವನ್ನು ಆಧರಿಸಿ ನಡೆದ ಅಧ್ಯಯನವೊಂದು ಹೇಳಿದೆ.

ಪ್ರಸಿದ್ಧ ಕಲಾವಿದ ಲಿಯೋನಾರ್ಡೊ ಡಾ ವಿಂಚಿ ಉದ್ದೇಶಪೂರ್ವಕವಾಗಿ ಆಕೆಯ ಮುಗುಳು ನಗುವನ್ನು ಚಿತ್ರಿಸಿದ್ದಾಗಿ ಲಂಡನ್‌ನ ಸೇಂಟ್‌ ಜಾರ್ಜ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮೊನಾಲಿಸಾ ನಗುಮುಖವು ವಿಶ್ವದ ಅತ್ಯುತ್ತಮ ಕಲಾಕೃತಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಸಂಶೋಧಕರು ನರವಿಜ್ಞಾನದ ತತ್ವಗಳನ್ನು ಆಧರಿಸಿ ಆಕೆಯ ಅಭಿವ್ಯಕ್ತಿಯ ಅಧ್ಯಯನ ನಡೆಸಿದ್ದಾರೆ. ಅಂದರೆ ಬಾಯಿಯ ಬಲ ಮತ್ತು ಎಡಭಾಗವನ್ನು ವಿಂಗಡಿಸಿ ಕನ್ನಡಿಯ ಮುಂದಿರಿಸಿ ಹರ್ಷಾಭಿವ್ಯಕ್ತಿಯ ವಿಧಾನಗಳನ್ನು ಗಮನಿಸುವ ಶಿಮರಿಕ್‌ (chimeric)ಫೇಸ್‌ ಟೆಕ್ನಿಕ್‌ ಬಳಸಿ ಈ ಅಧ್ಯಯನ ನಡೆಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.