
ಪ್ರಜಾವಾಣಿ ವಾರ್ತೆ
ಮಾಸ್ಕೊ: ಮುಂದಿನ ವಾರದ ಕೊನೆಯಲ್ಲಿ ಅಥವಾ ಆರಂಭದಲ್ಲಿ ರಷ್ಯಾ ರಾಜಧಾನಿಯಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಮುಟ್ಟಲಿದೆ ಎಂದು ಮಾಸ್ಕೊ ಮೇಯರ್ ಸೆರ್ಗೆಯ್ ಸೋಬಯಾನಿಕ್ ಅಂದಾಜಿಸಿದ್ದಾರೆ ಎಂದು ಇಂಟರ್‌ಫ್ಯಾಕ್ಟ್ ಸುದ್ದಿ ಸಂಸ್ಥೆ ಶುಕ್ರವಾರ ಹೇಳಿದೆ.
ರಷ್ಯಾದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ವರದಿಯಾಗಿದೆ. ಈ ಸಂಬಂಧ ಮುನ್ನೆಚ್ಚರಿಕೆಯಾಗಿ ಇದೇ 28 ರಿಂದ ಮಾಸ್ಕೊದಲ್ಲಿ ಭಾಗಶಃ ಲಾಕ್‌ಡೌನ್ ಜಾರಿಯಾಗಲಿದೆ.
ಔಷಧಾಲಯ, ಮಾರುಕಟ್ಟೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.