ADVERTISEMENT

ಮೌಂಟ್‌ ಎವರೆಸ್ಟ್‌ನಲ್ಲಿ ಹಿಮಪಾತ: ಸಂಕಷ್ಟದಲ್ಲಿ 200 ಮಂದಿ

ಪಿಟಿಐ
Published 6 ಅಕ್ಟೋಬರ್ 2025, 13:34 IST
Last Updated 6 ಅಕ್ಟೋಬರ್ 2025, 13:34 IST
ಮೌಂಟ್‌ ಎವರೆಸ್ಟ್
ಮೌಂಟ್‌ ಎವರೆಸ್ಟ್   

ಬೀಜಿಂಗ್‌: ಮೌಂಟ್‌ ಎವರೆಸ್ಟ್‌ನ ಟಿಬೆಟ್‌ ಭಾಗದ ಪೂರ್ವ ಇಳಿಜಾರಿನಲ್ಲಿ ಸಿಲುಕಿದ್ದವರಲ್ಲಿ 350 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 200 ಜನರ ಸಂಕಷ್ಟದಲ್ಲಿದ್ದಾರೆ.

ಶುಕ್ರವಾರದಿಂದ ಹಿಮಪಾತವಾಗುತ್ತಿರುವುದರಿಂದ ರಸ್ತೆಗಳು ಮುಚ್ಚಿಹೋಗಿವೆ. ನೂರಾರು ಮಂದಿ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ನೆರವು ನೀಡುತ್ತಿದ್ದಾರೆ.

ಮೌಂಟ್‌ ಎವರೆಸ್ಟ್‌ನಲ್ಲಿ ಸಾವಿರ ಜನ ಸಿಲುಕಿಹಾಕಿಕೊಂಡಿದ್ದಾರೆ ಎಂದು ಭಾನುವಾರ ವರದಿಯಾಗಿತ್ತು. 

ADVERTISEMENT

ಅಲ್ಲಿಂದ ಮರಳಿದ ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊಗಳ ಪ್ರಕಾರ, ಹಿಮಗಾಳಿಯು ಭಾನುವಾರ ಬಲವಾಗಿ ಅಪ್ಪಳಿಸಿದೆ. ರಸ್ತೆಗಳು ಹಿಮಾವೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.