
ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಹಾಗೂ ಮಧ್ಯಂತರ ಸರ್ಕಾರದ ಮಾಜಿ ಮುಖ್ಯಸ್ಥ ಮೊಹಮ್ಮದ್ ಯೂನಸ್
(ಸಂಗ್ರಹ ಚಿತ್ರ)
ಢಾಕಾ: ‘ನಿಕಟಪೂರ್ವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ನನ್ನನ್ನು ಹಲವು ಬಾರಿ ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದರು’ ಎಂದು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಆರೋಪಿಸಿದ್ದಾರೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷವು (ಬಿಎನ್‌ಪಿ) ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅಧ್ಯಕ್ಷರು ಯೂನಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಾಂಗ್ಲಾದ ಪ್ರಮುಖ ಪತ್ರಿಕೆ ‘ಕಾಲರ್ ಕಂಠೋ’ಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಹಾಬುದ್ದೀನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ಈ ಹಿಂದಿದ್ದ 18 ತಿಂಗಳ ಮಧ್ಯಂತರ ಸರ್ಕಾರದಲ್ಲಿ ನನ್ನೊಂದಿಗೆ ಯಾವೊಂದು ಪ್ರಮುಖ ವಿಷಯವನ್ನು ಚರ್ಚಿಸದಿದ್ದರೂ, ನನ್ನ ವಿರುದ್ಧ ಹಲವು ಸಂಚುಗಳನ್ನು ರೂಪಿಸಲಾಗಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.