ADVERTISEMENT

ಇಂಡೊನೇಷ್ಯಾದಲ್ಲಿ ಭೂಕಂಪ: ಹತ್ತು ಸಾವು, 150 ಮನೆ ನೆಲಸಮ

ಏಜೆನ್ಸೀಸ್
Published 20 ಆಗಸ್ಟ್ 2018, 18:45 IST
Last Updated 20 ಆಗಸ್ಟ್ 2018, 18:45 IST
ಇಂಡೊನೇಷ್ಯಾದಲ್ಲಿ ಲೊಂಬೊಕ್‌ನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಗೆ ಕಯಾನ್‌ಗಾನ್‌ ಬಂದರು ರಸ್ತೆ ಬಿರುಕುಬಿಟ್ಟಿದೆ – ಎಎಫ್‌ಪಿ ಚಿತ್ರ
ಇಂಡೊನೇಷ್ಯಾದಲ್ಲಿ ಲೊಂಬೊಕ್‌ನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಗೆ ಕಯಾನ್‌ಗಾನ್‌ ಬಂದರು ರಸ್ತೆ ಬಿರುಕುಬಿಟ್ಟಿದೆ – ಎಎಫ್‌ಪಿ ಚಿತ್ರ   

ಮತರಾಂ:‘ಇಲ್ಲಿನ ಲೊಂಬೊಕ್‌ ದ್ವೀಪದಲ್ಲಿ ಸರಣಿ ಪ್ರಬಲ ಭೂಕಂಪ ಸಂಭವಿಸಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ವೇಳೆ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪನದಲ್ಲಿ 6.9ರಷ್ಟು ಇತ್ತು ಎಂದು ಅಮೆರಿಕದ ಭೂವಿಜ್ಞಾನ ಸಂಸ್ಥೆ ತಿಳಿಸಿದೆ.

30ಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದು, 150 ಮನೆಗಳು, ದೇವಾಲಯಗಳು ನಾಶಗೊಂಡಿವೆ.

ADVERTISEMENT

‘ಲೊಂಬೊಕ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಮನೆಯ ಅವಶೇಷಗಳು ಕುಸಿದು ಇಬ್ಬರು ಸಾವನ್ನಪ್ಪಿದರು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.

‘ಭೂಕಂಪ ಸಂಭವಿಸಿದ ವೇಳೆ ಈ ಭಾಗದಲ್ಲಿ ಜನರು ಮನೆಯ ಹೊರಗಡೆ ನೆಲೆಸಿದ್ದರು. ಇದೇ ಕಾರಣದಿಂದ ಆಗಸ್ಟ್‌ 5ರಂದು ಸಂಭವಿಸಿದ ಭೂಕಂಪಕ್ಕೆ ಹೋಲಿಸಿದರೆ, ಲೊಂಬೊಕ್‌ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ’ ಎಂದು ಸುಟೊಪೊ ತಿಳಿಸಿದರು.

ಜುಲೈ 29 ಹಾಗೂ ಆಗಸ್ಟ್‌ 5ರಂದು ಬಾಲಿಯಲ್ಲಿ ಸಂಭವಿಸಿದ ಎರಡು ಭೂಕಂಪದಿಂದ ಸುಮಾರು500 ಮಂದಿ ಪ್ರಾಣ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.