ADVERTISEMENT

ಮ್ಯಾನ್ಮಾರ್: ಡಿ.28ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 14:03 IST
Last Updated 18 ಆಗಸ್ಟ್ 2025, 14:03 IST
...
...   

ಬ್ಯಾಂಕಾಕ್‌: ಮ್ಯಾನ್ಮಾರ್‌ನಲ್ಲಿ ಡಿಸೆಂಬರ್ 28ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಲ್ಲಿನ ಚುನಾವಣಾ ಆಯೋಗವು ಸೋಮವಾರ ಘೋಷಿಸಿದೆ.

2021ರಿಂದ ಮ್ಯಾನ್ಮಾರ್‌ದಲ್ಲಿನ ಆಡಳಿತವನ್ನು ಸೇನೆಯ ನಿಯಂತ್ರಣದಲ್ಲಿದೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಸೇನೆಯೇ ನೇಮಿಸಿದೆ.

ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ವೇಳಾಪಟ್ಟಿಯು ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ADVERTISEMENT

ಸೇನೆಯನ್ನು ಬೆಂಬಲಿಸುವ ‘ಯುನಿಯನ್ ಸೋಲ್ಜರಿಟಿ ಆ್ಯಂಡ್‌ ಡೆವಲಪ್‌ಮೆಂಟ್‌’ ಪಕ್ಷ ಸೇರಿದಂತೆ ಸುಮಾರು 60 ಪಕ್ಷಗಳು ನೋಂದಾಯಿಸಿಕೊಂಡಿವೆ.

ಸೇನೆಯ ನೇತೃತ್ವದಲ್ಲಿ ಚುನಾವಣೆ ನಡೆಯುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಶಸ್ತ್ರಾಸ್ತ್ರಧಾರಿಗಳ ಸಂಘಟನೆಗಳು ಸೇರಿದಂತೆ ಹಲವು ವಿರೋಧಿ ಸಂಘಟನೆಗಳು ಚುನಾವಣೆಗೆ ಅಡ್ಡಿಪಡಿಸುವುದಾಗಿ ಹೇಳಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.