ADVERTISEMENT

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿರುದ್ಧ ಭೂಗತ ಸರ್ಕಾರದಿಂದ ಪ್ರತ್ಯೇಕ ಸೇನೆ

ರಾಯಿಟರ್ಸ್
Published 29 ಮೇ 2021, 12:29 IST
Last Updated 29 ಮೇ 2021, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬರ್ಮಾ: ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿರುದ್ಧ ರಚನೆಯಾಗಿರುವ ಭೂಗತ ಸರ್ಕಾರವೂ ತನ್ನದೇ ಪ್ರತ್ಯೇಕ ಸೇನೆಯನ್ನು ಸ್ಥಾಪಿಸಿಕೊಂಡಿದೆ. ಅದರ ಮೊದಲ ಪಡೆಯ ನೇಮಕ ಮತ್ತು ತರಬೇತಿಯನ್ನೂ ಪೂರ್ಣಗೊಳಿಸಿದೆ. ಸೇನಾ ಪಡೆ ಸಮವಸ್ತ್ರ ಧರಿಸಿ ಮೆರವಣಿಗೆ ಮಾಡುತ್ತಿರುವ ವಿಡಿಯೊವನ್ನೂ ಬಿಡುಗಡೆ ಮಾಡಿದೆ.

'ದೇಶದ ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಗೃಹಬಂಧನದಲ್ಲಿಟ್ಟು, ಅಧಿಕಾರವನ್ನು ವಶಕ್ಕೆ ಪಡೆದು ಆ ಮೂಲಕ ದೇಶವನ್ನು ಗೊಂದಲಕ್ಕೆ ದೂಡಿದ ಸೈನ್ಯದ ವಿರುದ್ಧ 'ಪೀಪಲ್ಸ್‌ ಡಿಫೆನ್ಸ್‌ ಆರ್ಮಿ' ರಚನೆ ಮಾಡಿರುವುದಾಗಿ ಭೂಗತ 'ನ್ಯಾಷನಲ್‌ ಯೂನಿಟಿ ಗವರ್ನ್‌ಮೆಂಟ್‌ (ರಾಷ್ಟ್ರೀಯ ಏಕತಾ ಸರ್ಕಾರ)' ಘೋಷಿಸಿದೆ.

ಭೂಗತ ಸರ್ಕಾರದ ರಕ್ಷಣಾ ಸಚಿವ ಯೀ ಮೋನ್‌ ಅವರ ಹೆಸರಲ್ಲಿ ಸೇನಾ ಪಡೆಯ ಗೌರವ ವಂದನೆ ಸಮಾರಂಭವೂ ನಡೆದಿದೆ.

ADVERTISEMENT

'ಈ ಮಿಲಿಟರಿಯನ್ನು ಅಧಿಕೃತ ನಾಗರಿಕ ಸರ್ಕಾರವು ಸ್ಥಾಪಿಸಿದೆ' ಎಂದು ಅಪರಿಚಿತ ಅಧಿಕಾರಿಯೊಬ್ಬರು ಸಮಾರಂಭದಲ್ಲಿ ಹೇಳುತ್ತಾರೆ. 'ಪೀಪಲ್ಸ್‌ ಡಿಫೆನ್ಸ್‌ ಆರ್ಮಿ' ಜನರೊಂದಿಗಿದ್ದು, ಜನರನ್ನು ರಕ್ಷಿಸಬೇಕು.ಈ ಯುದ್ಧವನ್ನು ಗೆಲ್ಲಲು ನಾವು ಹೋರಾಡುತ್ತೇವೆ' ಎಂದು ಅವರು ಹೇಳುತ್ತಾರೆ.

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಕ್ತಾರರು ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

'ರಾಷ್ಟ್ರೀಯ ಏಕತಾ ಸರ್ಕಾರ ದೇಶವಿರೋಧಿಯಾಗಿದೆ. ಮತ್ತು, ಅದರಿಂದ ಸ್ಥಾಪನೆಯಾಗಿರುವ 'ಪೀಪಲ್ಸ್‌ ಡಿಫೆನ್ಸ್‌ ಆರ್ಮಿ'ಯು ಭಯೋತ್ಪಾದಕ ಗುಂಪು ಎಂದು ಗುರುತಿಸಲಾಗಿದೆ,' ಎಂದು ಮಿಲಿಟರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.