ನಿಕೋಷಿಯಾ: ಎರಡು ದಿನಗಳ ಸೈಪ್ರಸ್ ದೇಶದ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕಾರಿಯೋಸ್ III ಆಫ್ ಸೈಪ್ರಸ್’ ಪ್ರದಾನ ಮಾಡಲಾಗಿದೆ.
ಎರಡು ದಶಕಗಳಲ್ಲಿ ಸೈಪ್ರಸ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.
ಸೈಪ್ರಸ್‌ನ ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೌಲಿಡ್ಸ್ ಅವರು ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾಡನಾಡಿದ ಪ್ರಧಾನಿ ಮೋದಿ ‘ಸೈಪ್ರಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ವಿನೀತನಾಗಿದ್ದೇನೆ. ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರು ಹಾಗೂ ಭಾರತ ಮತ್ತು ಸೈಪ್ರಸ್ ದೇಶಗಳ ನಡುವಿನ ಗೆಳತನಕ್ಕೆ ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ.’
ಮುಂದಿನ ದಿನಗಳಲ್ಲಿ ಭಾರತ ಮತ್ತು ಸೈಪ್ರಸ್‌ನ ನಡುವಿನ ಭಾಂದವ್ಯವು ಇನ್ನಷ್ಟು ವೃದ್ಧಿಸಲಿದೆ. ಇದು ಕೇವಲ ಎರಡು ದೇಶಗಳಿಗಳಿಗಷ್ಟೇ ಲಾಭವಾಗದೇ, ಜಾಗತಿಕ ಶಾಂತಿ ಹಾಗೂ ರಕ್ಷಣೆಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಕೆನಾಡದಲ್ಲಿ ನಡೆಯಲಿರುವ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸೈಪ್ರಸ್‌ಗೆ ಮೋದಿ ಭೇಟಿ ನೀಡಿರುವ ಪ್ರಧಾನಿ ಮೋದಿ, ದ್ವಿಪಕ್ಷೀಯ ಬಾಂಧವ್ಯ ಹಾಗೂ ಉಭಯ ದೇಶಗಳ ನಡುವಿನ ಕೆಲವು ಒಪ್ಪಂದಗಳ ಕುರಿತು ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೌಲಿಡ್ಸ್ ಅವರವ ಜೊತೆ ಮಾತುಕತೆ ನಡೆಸಿದ್ದಾರೆ.
ಸೈಪ್ರಸ್‌ನ ಮೊದಲ ಅಧ್ಯಕ್ಷ ಆರ್ಚ್ಬಿಷಪ್ ಮಕಾರಿಯೋಸ್ III ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.