ADVERTISEMENT

ವಿಶ್ವಸಂಸ್ಥೆಯ ಉನ್ನತ ಮಟ್ಟದ ವಾರ್ಷಿಕ ಅಧಿವೇಶನ: ಪ್ರಧಾನಿ ಮೋದಿ ಭಾಷಣ ಇಲ್ಲ

ಪಿಟಿಐ
Published 6 ಸೆಪ್ಟೆಂಬರ್ 2025, 3:21 IST
Last Updated 6 ಸೆಪ್ಟೆಂಬರ್ 2025, 3:21 IST
<div class="paragraphs"><p>ನರೇಂದ್ರ ಮೋದಿ, ಭಾರತ ಪ್ರಧಾನಿ</p></div>

ನರೇಂದ್ರ ಮೋದಿ, ಭಾರತ ಪ್ರಧಾನಿ

   

– ರಾಯಿಟರ್ಸ್ ಚಿತ್ರ

ವಿಶ್ವಸಂಸ್ಥೆ: ಈ ಮಾಸಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ವಾರ್ಷಿಕ ಅಧಿವೇಶನದ ಸಾಮಾನ್ಯ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಇರುವುದಿಲ್ಲ. ಇಲ್ಲಿ ಬಿಡುಗಡೆಗೊಳಿಸಲಾದ ಭಾಷಣ ಮಾಡುವವರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ನರೇಂದ್ರ ಮೋದಿಯವರ ಹೆಸರು ಇಲ್ಲ.

ADVERTISEMENT

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನ ಸೆಪ್ಟೆಂಬರ್ 9ರಿಂದ ಆರಂಭವಾಗಲಿದ್ದು, ಉನ್ನತ ಮಟ್ಟದ ಚರ್ಚೆ ಸೆಪ್ಟೆಂಬರ್ 23–29ರವರೆಗೆ ನಡೆಲಿದೆ. ಮೊದಲು ಭಾಷಣ ಮಾಡಲು ಬ್ರೆಜಿಲ್‌ಗೆ ಅವಕಾಶ ಇದ್ದು, ನಂತರ ಅಮೆರಿಕಕ್ಕೆ ಇದೆ.

ಸೆಪ್ಟೆಂಬರ್‌ 23ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ನಿಗದಿಯಾಗಿದೆ. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಮಾಡುವ ಮೊದಲ ಭಾಷಣ ಅದಾಗಿರಲಿದೆ.

ಪರಿಷ್ಕೃತ ತಾತ್ಕಾಲಿಕ ಪಟ್ಟಿಯ ಪ್ರಕಾರ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಭಾರತವನ್ನು ‘ಸಚಿವರು’ ಪ್ರತಿನಿಧಿಸಲಿದ್ದಾರೆ.

ವಿದೇಶಾಂಗ ಇಲಾಖೆಯ ಸಚಿವ ಎಸ್‌. ಜೈಶಂಕರ್ ಅವರು ಸೆಪ್ಟೆಂಬರ್ 27ರಂದು ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

ಈ ಹಿಂದೆ ಜುಲೈನಲ್ಲಿ ಬಿಡುಗಡೆಯಾದ ತಾತ್ಕಾಲಿಕ ಪಟ್ಟಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 26ರಂದು ಭಾಷಣ ಮಾಡಬೇಕಿತ್ತು.

ಇಸ್ರೇಲ್, ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸರ್ಕಾರಗಳ ಮುಖ್ಯಸ್ಥರು ಸೆಪ್ಟೆಂಬರ್ 26ರಂದು ಭಾಷಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.