ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಮಂಗಳ ಗ್ರಹಕ್ಕೆ ಕಳುಹಿಸಲು ಸಾರ್ವಜನಿಕರಿಂದ ಹೆಸರು ಆಹ್ವಾನಿಸಿದೆ.
ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಮಾನವಸಹಿತ ಗಗನ ನೌಕೆಯನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ, ಅದಕ್ಕಿಂತಲೂ ಒಂದು ವರ್ಷ ಮೊದಲು ಜನರ ಹೆಸರುಗಳನ್ನು ಚಿಪ್‌ಗಳಲ್ಲಿ ಕೊರೆದು, ರೋವರ್ ಬಾಹ್ಯಾಕಾಶ ನೌಕೆಯ ಮೂಲಕ ಮಂಗಳ ಗ್ರಹಕ್ಕೆಕಳುಹಿಸಲಿದೆ.
2020 ಜುಲೈಯಲ್ಲಿ ರೋವರ್ ಗಗನ ನೌಕೆಯನ್ನು ಮಂಗಳಗ್ರಹಕ್ಕೆ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಈ ನೌಕೆಯು 2021ರ ಫೆಬ್ರುವರಿಯಲ್ಲಿ ಮಂಗಳನ ಅಂಗಳದಲ್ಲಿ ಇಳಿಯಲಿದೆ ಎಂದು ನೀರೀಕ್ಷಿಸಲಾಗಿದೆ.
ಸಾವಿರ ಕಿ.ಗ್ರಾಂ. ಭಾರದ ಮಾನವರಹಿತ ಗಗನ ನೌಕೆ ರೋವರ್, ಮಂಗಳ ಗ್ರಹದಲ್ಲಿ ಸೂಕ್ಷ್ಮ ಜೀವಿಗಳ ಇರುವಿಕೆ, ಅಲ್ಲಿನ ವಾತಾವರಣ ಮೊದಲಾದವುಗಳ ಕುರಿತು ಅಧ್ಯಯನ ನಡೆಸಲಿದೆ.
20ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ನಾಸಾ ಈ ನೌಕೆಯ ಮೂಲಕ ಮಂಗಳ ಗ್ರಹಕ್ಕೆ ಕಳುಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.