ವಾರ್ಸಾ: ರಾಷ್ಟ್ರೀಯವಾದಿ ಇತಿಹಾಸಕಾರ ಕಾರೊಲ್ ನವ್ರೊಸ್ಕಿ ಅವರು ಪೋಲೆಂಡ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, 42 ವರ್ಷದ ನವ್ರೊಸ್ಕಿ ಅವರು ಶೇಕಡ 50.9ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ.
ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ 53 ವರ್ಷದ ರಫೇಲ್ ತ್ರಾಕೊವ್‌ಸ್ಕಿ ಶೇ 49.1ರಷ್ಟು ಮತಗಳನ್ನು ಪಡೆದರು. ಫಲಿತಾಂಶದ ಬೆನ್ನಲ್ಲೇ ಸೋಲು ಒಪ್ಪಿಕೊಂಡ ರಫೆಲ್, ‘ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೆಲುವು ಪಡೆದ ನವ್ರೊಸ್ಕಿಗೆ ಅಭಿನಂದನೆಗಳು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನವ್ರೊಸ್ಕಿ ಅವರ ಗೆಲುವು ಪ್ರಧಾನಿ ಡೊನಾಲ್ಡ್ ಟಸ್ಕ್ ನೇತೃತ್ವದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ತಂದೊಡ್ಡಲಿದೆ’ ಎಂದು ವಿಶ್ಲೇಷಿಸಲಾಗಿದೆ.
ಎರಡು ಅವಧಿಗಳಿಗೆ ಅಧಿಕಾರದಲ್ಲಿದ್ದ ನಿರ್ಗಮಿತ ಅಧ್ಯಕ್ಷ ಆಂಡ್ರೆ ದೂದಾ ಅವರು ನವ್ರೊಸ್ಕಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.