ADVERTISEMENT

ಭಾರತ-ನೇಪಾಳ ಗಡಿ ಸಂಪರ್ಕಿಸುವ ರಸ್ತೆ ಉದ್ಘಾಟನೆ

ಪಿಟಿಐ
Published 7 ಫೆಬ್ರುವರಿ 2021, 2:24 IST
Last Updated 7 ಫೆಬ್ರುವರಿ 2021, 2:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ಹಿಮಾಲಯ ಕಣಿವೆಯನ್ನು ಹಲವಾರು ಪ್ರದೇಶಗಳೊಂದಿಗೆ ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾಗಿರುವ 108 ಕಿ.ಮೀ.ಉದ್ದದ ರಸ್ತೆಯನ್ನು ಭಾರತ ಹಾಗೂ ನೇಪಾಳ ಜಂಟಿಯಾಗಿ ಉದ್ಘಾಟಿಸಿವೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಭಾರತ-ನೇಪಾಳ ಗಡಿಯನ್ನು ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ರಸ್ತೆಯು ಗಡಿಯುದ್ಧಕ್ಕೂ ದೈನಂದಿನ ಸಂಚಾರವನ್ನು ಸುಗಮಗೊಳಿಸಲಿದೆ.

ಭಾರತದ ಅನುದಾನ ನೆರವಿನೊಂದಿಗೆ ರಸ್ತೆ ನಿರ್ಮಿಸಲಾಗಿದೆ. ಭಾರತದ ಗಡಿ ಲಕ್ಷ್ಮೀಪುರ-ಬಲಾರಾದಿಂದ ನೇಪಾಳ ಸರ್ಲಾಹಿ ಜಿಲ್ಲೆಯ ಗಧೈಯಾವರೆಗಿನ ರಸ್ತೆಯನ್ನು ಡಾಮರೀಕರಣಗೊಳಿಸಲಾಗಿದೆ.

ADVERTISEMENT

ಭಾರತದ ಕಾನ್ಸುಲೇಟ್ ಜನರಲ್ ನಿತೇಶ್ ಕುಮಾರ್, ಚಂದ್ರನಿಗಪುರ ರಸ್ತೆ ವಿಭಾಗದ ಮುಖ್ಯಸ್ಥ ಬಿನೋದ್ ಹಾಗೂ ಬಿರ್ಗುಂಜ್ ಉಪಸ್ಥಿತರಿದ್ದರು.

ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ ರಸ್ತೆ ನಿರ್ಮಾಣಕ್ಕೆ ಭಾರತವು 4.4 ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಭಾರತ ಹಾಗೂ ನೇಪಾಳ ಸರ್ಕಾರಗಳ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾಗಿರುವ ರಸ್ತೆಯು ಇಲ್ಲಿನ ಪ್ರದೇಶದ ಜನರ ಅಭಿವೃದ್ಧಿಗೆ ಪೂರಕವಾಗಲಿದೆ.

ಕಳೆದ ವರ್ಷ ಮೇ 8ರಂದು ಉತ್ತರಾಖಂಡದ ಧಾರ್ಚುಲಾದಲ್ಲಿ ಲಿಪುಲೇಖ್ ಪಾಸ್ ಸಂಪರ್ಕಿಸುವ 80ಕಿ.ಮೀ. ಉದ್ದದ ರಸ್ತೆಯನ್ನು ರಕ್ಷಣಾ ಸಚಿವಾ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಇದಾದ ಬಳಿಕ ಭಾರತ ಹಾಗೂ ನೇಪಾಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಿಗಡಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.