ADVERTISEMENT

ಕಠ್ಮಂಡು | ಕಂದಕಕ್ಕೆ ಬಿದ್ದ ಜೀಪ್‌: 8 ಮಂದಿ ಸಾವು

ಪಿಟಿಐ
Published 25 ಅಕ್ಟೋಬರ್ 2025, 13:20 IST
Last Updated 25 ಅಕ್ಟೋಬರ್ 2025, 13:20 IST
   

ಕಠ್ಮಂಡು: ಜೀಪ್‌ವೊಂದು 700 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ನೇಪಾಳದ ಕರ್ನಾಲಿ ಪ್ರಾಂತ್ಯದಲ್ಲಿ ನಡೆದಿದೆ.

ರಾಜಧಾನಿ ಕಠ್ಮಂಡುವಿನಿಂದ 500 ಕಿ.ಮೀ. ದೂರದ ಪಶ್ಚಿಮ ರುಕುಂ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸೇಲ್‌ಖಡಿಗೆ ಜೀಪ್‌ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಜೀಪ್‌ನಲ್ಲಿ 18 ಮಂದಿ ಪ್ರಯಾಣಿಕರು ಇದ್ದರು.

‘ಅತಿಯಾದ ವೇಗದಲ್ಲಿ ಜೀಪ್‌ ಚಲಾಯಿಸುತ್ತಿದ್ದ ಕಾರಣ, ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.