ADVERTISEMENT

ನೇಪಾಳ: ಪ್ರಧಾನಿ ಒಲಿ ವಿಶ್ವಾಸ ಮತ ಯಾಚನೆ

ಪಿಟಿಐ
Published 9 ಮೇ 2021, 15:59 IST
Last Updated 9 ಮೇ 2021, 15:59 IST
ಕೆ.ಪಿ.ಶರ್ಮಾ ಒಲಿ
ಕೆ.ಪಿ.ಶರ್ಮಾ ಒಲಿ   

ಕಠ್ಮಂಡು: ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಸಂಸತ್‌ನಲ್ಲಿ ಸೋಮವಾರ (ಮೇ 10) ವಿಶ್ವಾಸ ಮತ ಯಾಚನೆ ಮಾಡುವರು.

ಒಲಿ ಪ್ರತಿನಿಧಿಸುವ ಸಿಪಿಎನ್‌–ಯುಎಂಎಲ್‌ ಹಾಗೂ ಪುಷ್ಪಕಮಲ್‌ ದಹಾಲ್‌ (ಪ್ರಚಂಡ) ನೇತೃತ್ವದ ಸಿಪಿಎನ್‌ (ಮಾವೋವಾದಿ) ಮೈತ್ರಿಕೂಟ ಸರ್ಕಾರ ರಚಿಸಿದೆ. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನುಪ್ರಚಂಡ ನೇತೃತ್ವದ ಪಕ್ಷ ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಒಲಿ ಸಂಸತ್‌ನ ಕೆಳಮನೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT