ADVERTISEMENT

ನೇಪಾಳ: ಅಧ್ಯಕ್ಷೀಯ ಚುನಾವಣೆ ಬಳಿಕ ಪ್ರಧಾನಿಯಿಂದ ವಿಶ್ವಾಸಮತ ಯಾಚನೆ

ಪಿಟಿಐ
Published 1 ಮಾರ್ಚ್ 2023, 14:04 IST
Last Updated 1 ಮಾರ್ಚ್ 2023, 14:04 IST
ಪುಷ್ಪಾ ಕಮಲ್‌ ದಹಾಲ್‌ ಪ್ರಚಂಡ 
ಪುಷ್ಪಾ ಕಮಲ್‌ ದಹಾಲ್‌ ಪ್ರಚಂಡ    

ಕಠ್ಮಂಡು: ನೇಪಾಳದ ಅಧ್ಯಕ್ಷೀಯ ಚುನಾವಣೆಗೆ ಒಂಬತ್ತು ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ, ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ಅವರು ವಿಶ್ವಾಸಮತ ಯಾಚನೆ ಮತ್ತು ಸಂಪುಟ ಪುನರ್‌ವಿಸ್ತರಣೆಯನ್ನು ಚುನಾವಣೆ ಬಳಿಕವೇ ನಡೆಸಲಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕಠ್ಮಂಡು ಪೋಸ್ಟ್‌ ಪತ್ರಿಕೆಗೆ ಬುಧವಾರ ವರದಿ ಮಾಡಿದೆ.

ನೇಪಾಳದ ಮೈತ್ರಿ ಸರ್ಕಾರದಿಂದ ಮೂರು ಮಿತ್ರಪಕ್ಷಗಳನ್ನು ಹೊರಬಂದ ಕಾರಣ ಖಾಲಿ ಉಳಿದಿರುವ 16 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಪುಷ್ಪ ಅವರು ತಯಾರಿ ನಡೆಸಿದ್ದರು.

ವಿಶ್ವಾಸಮತ ಯಾಚಿಸಲು ಪ್ರಧಾನಿಗೆ ನೀಡಲಾಗಿರುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅವಕಾಶವನ್ನು ನಿಗದಿತ ಅವಧಿಯೊಳಗೆ ಪಾಲಿಸಬೇಕು. ಆದರೆ, ಅಧ್ಯಕ್ಷೀಯ ಚುನಾವಣೆ ಮಾರ್ಚ್‌ 9ರಂದು ನಡೆಯಲಿರುವುದರಿಂದ ಸದ್ಯ ನಾವು ಚುನಾವಣೆ ಕುರಿತು ಗಮನಹರಿಸಿದ್ದೇವೆ’ ಎಂದು ಸರ್ಕಾರದ ವಕ್ತಾರೆ ರೇಖಾ ಶರ್ಮ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.