ADVERTISEMENT

ಬಿಕ್ಕಟ್ಟು ಶಮನಗೊಳಿಸಲು ಚರ್ಚೆಗೆ ಮುಂದೆ ಬನ್ನಿ: ನೇಪಾಳ ಅಧ್ಯಕ್ಷ

ಪಿಟಿಐ
Published 9 ಸೆಪ್ಟೆಂಬರ್ 2025, 15:56 IST
Last Updated 9 ಸೆಪ್ಟೆಂಬರ್ 2025, 15:56 IST
   

ಕಠ್ಮಂಡು: ‘ಎಲ್ಲ ಪಕ್ಷಗಳು ಸಂಯಮದಿಂದ ವರ್ತಿಸಿ, ದೇಶದಲ್ಲಿ ತಲೆದೋರಿರುವ ಈ ಬಿಕ್ಕಟ್ಟು ಶಮನಗೊಳಿಸಲು ಮಾತುಕತೆಗೆ ಮುಂದೆ ಬನ್ನಿ’ ಎಂದು ಅಧ್ಯಕ್ಷ ರಾಮಚಂದ್ರ ಪೌದೆಲ್ ಮಂಗಳವಾರ ಎಲ್ಲ ಪಕ್ಷಗಳಿಗೆ ಕರೆ ನೀಡಿದರು. ಪ್ರತಿಭಟನೆ ನಡೆಸುತ್ತಿರುವ ಯುವ ಸಮೂಹಕ್ಕೂ ಇದೇ ಮನವಿ ಮಾಡಿದರು.

‘ದೇಶವು ಸಂಕಷ್ಟದ ಸಮಯದಲ್ಲಿದೆ. ಓಲಿ ಶರ್ಮ ಅವರು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಈ ದೇಶ, ದೇಶದ ಜನರನ್ನು ಮತ್ತು ಪ್ರಜಾಪ‍್ರಭುತ್ವವನ್ನು ಪ್ರೀತಿಸುವ ಎಲ್ಲರಿಂದ ಸಹಕಾರ ಬೇಕಿದೆ. ಈ ಬಿಕ್ಕಟ್ಟು ಶಮನಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT