ADVERTISEMENT

ನೇಪಾಳ: ರಾಜಕೀಯ ಅಸ್ಥಿರತೆಯ ನೋಟ

ರಾಯಿಟರ್ಸ್
Published 10 ಸೆಪ್ಟೆಂಬರ್ 2025, 0:19 IST
Last Updated 10 ಸೆಪ್ಟೆಂಬರ್ 2025, 0:19 IST
<div class="paragraphs"><p>ನೇಪಾಳ ಸರ್ಕಾರದ ಮುಖ್ಯ ಆಡಳಿತ ಕಟ್ಟಡ ‘ಸಿಂಘ ದರ್ಬಾರ್’ಕ್ಕೆ ಬೆಂಕಿಗೆ ಆಹುತಿಯಾಯಿತು</p></div>

ನೇಪಾಳ ಸರ್ಕಾರದ ಮುಖ್ಯ ಆಡಳಿತ ಕಟ್ಟಡ ‘ಸಿಂಘ ದರ್ಬಾರ್’ಕ್ಕೆ ಬೆಂಕಿಗೆ ಆಹುತಿಯಾಯಿತು

   

ನವದೆಹಲಿ: 2008ರಿಂದ ಈಚೆಗೆ ನೇಪಾಳದಲ್ಲಿ 14 ಸರ್ಕಾರಗಳು ರಚನೆಯಾಗಿವೆ. ಈ ಯಾವ ಸರ್ಕಾರವು 5 ವರ್ಷದ ಆಡಳಿತ ಅವಧಿಯನ್ನು ಪೂರ್ಣಗೊಳಿಸಿಲ್ಲ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ದೇಶದಲ್ಲಿ ನಡೆದ ರಾಜಕೀಯ ಅಸ್ಥಿರತೆಯ ಕುರಿತು ಪ್ರಮುಖ ಘಟನಾವಳಿಗಳ ಸಣ್ಣ ಪರಿಚಯ ಇಲ್ಲಿದೆ: 

1951: ಇದಕ್ಕೂ ಮೊದಲು ನೇಪಾಳವನ್ನು ವಿವಿಧ ರಾಜಮನೆತನಗಳು ಆಳಿವೆ. ರಾಣಾ ರಾಜಮನೆತನವು ಪ್ರಧಾನಿಯನ್ನು ಆಡಳಿತದ ಪ್ರಮುಖನನ್ನಾಗಿಸಿಕೊಂಡು ಆಡಳಿತ ನಡೆಸಿತ್ತು. ವಂಶಪಾರಂಪರ್ಯವಾಗಿ ರಾಜಮನೆತನದವರೇ ಈ ಹುದ್ದೆಗೇರುತ್ತಿದ್ದರು. ಪ್ರಜಾಪ್ರಭುತ್ವಾದಿ ಚಳವಳಿಯ ಮೂಲಕ 1951ರಲ್ಲಿ ಈ ರಾಜಮನೆತನವನ್ನು ಆಡಳಿತದಿಂದ ಕೆಳಗಿಳಿಸಿ, ಪ್ರಜಾಪ್ರಭುತ್ವಾದಿ ಸರ್ಕಾರ ರಚನೆಯಾಯಿತು

ADVERTISEMENT

1961-1990: ದೇಶದಲ್ಲಿದ್ದ ರಾಜಕೀಯ ಪಕ್ಷಗಳನ್ನು ರಾಜ ಮಹೇಂದ್ರನು 1961ರಲ್ಲಿ ತೆಗೆದು ಹಾಕಿದ. ಮತ್ತೊಮ್ಮೆ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡನು. ಈ ಆಡಳಿತ ವೈಖರಿಗೆ ‘ಪಂಚಾಯತ್‌’ ಎಂದು ಆತನೇ ಹೆಸರಿಟ್ಟನು. ರಾಜನ ಆಡಳಿತವು ಮತ್ತೊಮ್ಮೆ ಜನರನ್ನು ಉಸಿರು ಕಟ್ಟಿಸುವಂತೆ ಮಾಡಿತು.

ಈ ಆಕ್ರೋಶವು 1990ರಲ್ಲಿ ಸ್ಫೋಟಗೊಂಡಿತು. ವಿವಿಧ ರಾಜಕೀಯ ಪಕ್ಷಗಳು, ಜನರು ಅಭಿಯಾನ ಆರಂಭಿಸಿದರು. ಮತ್ತೊಮ್ಮೆ ಪ್ರಜಾಪ್ರಭುತ್ವವಾದಿ ಸರ್ಕಾರ ರಚನೆಗೆ, ಬಹುಪಕ್ಷೀಯ ವ್ಯವಸ್ಥೆ ಸ್ಥಾಪನೆಗೆ ಚಳವಳಿ ನಡೆಸಿದರು. ಇದನ್ನು ‘ಜನರ ಚಳವಳಿ’ ಎಂದೇ ಕರೆಯಲಾಗುತ್ತದೆ. ಬಳಿಕ ಪಕ್ಷಗಳ ಮೇಲಿದ್ದ ರದ್ದತಿಯನ್ನು ರಾಜ ಬೀರೇಂದ್ರನು ತೆರವು ಮಾಡಿದನು. ‘ಪಂಚಾಯತ್‌’ ವ್ಯವಸ್ಥೆಯು ಅವಸಾನ ಕಂಡಿತು

1996: ಸಿರಿತನದಿಂದ ಕೂಡಿದ್ದ ಸಂಸದೀಯ ವ್ಯವಸ್ಥೆಯನ್ನು ಜನರ ಕೈಗೆಟಕುವ ವ್ಯವಸ್ಥೆಯನ್ನಾಗಿ ಮರುರೂಪಿಸಲು ಮಾವೋವಾದಿಗಳು ಹಿಂಸಾತ್ಮಕವಾಗಿ ಚಳವಳಿಯನ್ನು ಆರಂಭಿಸಿದರು. ನಾಗರಿಕ ಯುದ್ಧದ ರೀತಿಯಲ್ಲಿ ಈ ಚಳವಳಿಯು 10 ವರ್ಷ ನಡೆಯಿತು. ಇದರಲ್ಲಿ 17 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟರು

2006-2015: ರಾಜಾಪ್ರಭುತ್ವದ ವಿರುದ್ಧ 2006ರಲ್ಲಿ ಜನರು ಪ್ರತಿಭಟನೆ ಆರಂಭಿಸಿದರು. 2008ರಲ್ಲಿ ರಾಜಪ್ರಭುತ್ವವು ಕೊನೆಗೊಂಡಿತು. ಈ ಬಳಿಕ ನೇಪಾಳವು ಸಂಪೂರ್ಣ ಪ್ರಜಾಪ್ರಭುತ್ವವಾದಿ ದೇಶವಾಯಿತು. ರಾಜ ಜ್ಞಾನೇಂದ್ರನು ಕೊನೆಯ ರಾಜ. ಕಠ್ಮಂಡುವಿನಲ್ಲಿ ಈತನು ಸಾಮಾನ್ಯ ಪ್ರಜೆಯಂತೆ ಜೀವಿಸತೊಡಗಿದ.

2015ರಲ್ಲಿ ದೇಶವು ನೂತನ ಸಂವಿಧಾನವನ್ನು ಅಳವಡಿಸಿಕೊಂಡಿತು

2015–2025: 2015ರ ಅಕ್ಟೋಬರ್‌ನಲ್ಲಿ ಪ್ರಥಮ ಬಾರಿಗೆ ಕೆ.ಪಿ. ಓಲಿ ಶರ್ಮ ಅವರು ದೇಶದ ಪ್ರಧಾನಿಯಾದರು. ಒಂದು ವರ್ಷದವರೆಗೆ ಈ ಸರ್ಕಾರವು ಆಡಳಿತ ನಡೆಸಿತು. ಬಳಿಕ ಎರಡನೇ ಬಾರಿಗೆ 2018ರಲ್ಲಿ ಮತ್ತು ಮೂರನೇ ಬಾರಿಗೆ 2021ರಲ್ಲಿ ಮರುಆಯ್ಕೆಗೊಂಡರು. 2024ರಲ್ಲಿ ಓಲಿ ಅವರು ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಗೇರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.