ADVERTISEMENT

ನೇಪಾಳದ ಬಹುದೊಡ್ಡ ಕಮ್ಯುನಿಸ್ಟ್‌ ಪಾರ್ಟಿ ‘ಸಿಪಿಎನ್‌–ಯುಎಂಎಲ್‌‘ ವಿಭಜನೆ

ಸಿಪಿಎನ್‌–ಯುಎಂಎಲ್‌(ಸೋಷಿಯಲಿಸ್ಟ್‌) – ಹೊಸ ಪಕ್ಷಕ್ಕಾಗಿ ನೋಂದಣಿ

ಪಿಟಿಐ
Published 19 ಆಗಸ್ಟ್ 2021, 10:55 IST
Last Updated 19 ಆಗಸ್ಟ್ 2021, 10:55 IST
ಮಾಧವ್ ಕುಮಾರ್ ನೇಪಾಳ್ಚಿತ್ರ: ಮಾಧವ್‌ಕುಮಾರ್ ಟ್ವಿಟರ್
ಮಾಧವ್ ಕುಮಾರ್ ನೇಪಾಳ್ಚಿತ್ರ: ಮಾಧವ್‌ಕುಮಾರ್ ಟ್ವಿಟರ್   

ಕಠ್ಮಂಡು: ನೇಪಾಳದ ಪ್ರಮುಖ ವಿರೋಧ ಪಕ್ಷ ಹಾಗೂ ದೇಶದ ಅತಿ ದೊಡ್ಡ ಕಮ್ಯುನಿಸ್ಟ್ ಪಕ್ಷ ಸಿಪಿಎನ್‌–ಯುಎಂಎಲ್‌ ಬುಧವಾರ ಅಧಿಕೃತವಾಗಿ ವಿಭಜನೆಯಾಗಿದೆ.

‘ರಾಜಕೀಯ ಪಕ್ಷಗಳ ಕಾಯ್ದೆ–2071‘ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಈ ಪಕ್ಷವು ವಿಭಜನೆಗೊಂಡಿದೆ.

ರಾಜಕೀಯ ಪಕ್ಷಗಳು ಸುಲಭವಾಗಿ ವಿಭಜನೆಗೊಳ್ಳಲು ನೆರವಾಗುವಂತಹ ಈ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಸರ್ಕಾರ ಬೆಂಬಲಿಸಿದ ನಂತರ, ಪಕ್ಷದ ಭಿನ್ನಮತೀಯ ನಾಯಕ ಮಾಧವ್ ಕುಮಾರ್ ನೇಪಾಳ್ ನೇತೃತ್ವದ ಬಣ ಹೊಸ ರಾಜಕೀಯ ಪಕ್ಷ ನೋಂದಾವಣೆಗೆ ಮುಂದಾಯಿತು. ಈ ಸಂಬಂಧ ‘ಸಿಪಿಎನ್‌–ಯುಎಂಎಲ್‌(ಸೋಷಿಯಲಿಸ್ಟ್‌)‘ ಹೆಸರಲ್ಲಿ ಹೊಸ ಪಕ್ಷದ ನೋಂದಣಿಗಾಗಿ ಬುಧವಾರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನೂ ಸಲ್ಲಿಸಿದೆ.

ADVERTISEMENT

ಇದಕ್ಕೂ ಮೊದಲು ಬುಧವಾರದಂದು ಮಂತ್ರಿ ಮಂಡಲದ ಶಿಫಾರಸಿನ ಅನ್ವಯ, ನೇಪಾಳದ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು, ರಾಜಕೀಯ ಪಕ್ಷಗಳ ವಿಭಜನೆಯನ್ನು ಸರಾಗಗೊಳಿಸುವ ಉದ್ದೇಶದೊಂದಿಗೆ ‘ರಾಜಕೀಯ ಪಕ್ಷಗಳ ಕಾಯ್ದೆ 2071’ಕ್ಕೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.