ADVERTISEMENT

ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 16:12 IST
Last Updated 21 ಜನವರಿ 2026, 16:12 IST
ಬೆಂಜಮಿನ್‌ ನೆತನ್ಯಾಹು
ಬೆಂಜಮಿನ್‌ ನೆತನ್ಯಾಹು   

ಜೆರುಸಲೇಂ: ಗಾಜಾದ ಆಡಳಿತದ ಮೇಲ್ವಿಚಾರಣೆ ನಡೆಸಲಿರುವ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಸಮ್ಮತಿಸಿದ್ದಾರೆ.

ಹಮಾಸ್‌ – ಇಸ್ರೇಲ್‌ ಕದನ ವಿರಾಮ ಒಪ್ಪಂದದ 2ನೇ ಹಂತದ ಅನ್ವಯ ರೂಪಿಸಲಾಗಿರುವ ‘ಗಾಜಾ ಶಾಂತಿ ಮಂಡಳಿ’ ಸೇರಲು ವಿವಿಧ ದೇಶಗಳ ನಾಯಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಹ್ವಾನ ನೀಡಿದ್ದಾರೆ.

ಇಸ್ರೇಲ್‌ನ ಪ್ರತಿಸ್ಪರ್ಧಿಯಾದ ಟರ್ಕಿಗೂ ಶಾಂತಿ ಮಂಡಳಿಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದರಿಂದ, ನೆತನ್ಯಾಹು ಕಚೇರಿಯು ಈ ಹಿಂದೆ ಮಂಡಳಿಯ ಕಾರ್ಯಕಾರಿ ಸಮಿತಿಯ ರಚನೆಯನ್ನೇ ಟೀಕಿಸಿತ್ತು. ಇದೀಗ, ಟ್ರಂಪ್ ಅವರ ಆಹ್ವಾನವನ್ನು ಸ್ವೀಕರಿಸಿರುವುದಾಗಿ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ADVERTISEMENT

ಗಾಜಾ ಕದನ ವಿರಾಮ ಒಪ್ಪಂದದ ಮೇಲ್ವಿಚಾರಣೆಗಾಗಿಯೇ ಟ್ರಂಪ್ ಅವರು ಜಾಗತಿಕ ನಾಯಕರನ್ನೊಳಗೊಂಡ ತಂಡವೊಂದನ್ನು ರಚಿಸಲು ಮುಂದಾಗಿದ್ದಾರೆ. ಈ ಮಂಡಳಿಯು ವಿಶ್ವಸಂಸ್ಥೆಗೆ ಪರ್ಯಾಯವಾಗಿ ಕೆಲಸ ಮಾಡಲಿದೆ ಎಂಬ ಸುಳಿವನ್ನು ನೀಡಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಟ್ರಂಪ್ ಭಾಗಿಯಾಗಲಿದ್ದು, ಶಾಂತಿ ಮಂಡಳಿಯ ಬಗ್ಗೆ ಹೆಚ್ಚಿನ ವಿವರವನ್ನು ಅಲ್ಲಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.