ADVERTISEMENT

ಇಸ್ರೇಲ್‌: ಸರ್ಕಾರ ರಚನೆಗೆ ನೇತನ್ಯಾಹು ನೇತೃತ್ವದ ಮೈತ್ರಿಕೂಟ ಸಜ್ಜು

ಪಿಟಿಐ
Published 4 ನವೆಂಬರ್ 2022, 11:19 IST
Last Updated 4 ನವೆಂಬರ್ 2022, 11:19 IST
ಬೆಂಜಮಿನ್‌ ನೇತನ್ಯಾಹು
ಬೆಂಜಮಿನ್‌ ನೇತನ್ಯಾಹು   

ಜೆರುಸಲೇಂ: ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ನೇತೃತ್ವದ ಮೈತ್ರಿಕೂಟ ಬಹುಮತ ಪಡೆದಿದೆ. ಈ ಮೂಲಕ ದೇಶದಲ್ಲಿ ಮೂಡಿದ್ದ ರಾಜಕೀಯ ಅನಿಶ್ಚಿತತೆ ಅಂತ್ಯಗೊಂಡಿದೆ.

120 ಸದಸ್ಯ ಬಲದ ಸಂಸತ್ತಿನಲ್ಲಿ ಮೈತ್ರಿಕೂಟವು 64 ಸ್ಥಾನ ಗೆದ್ದುಕೊಂಡಿದೆ. ಅಲ್ಪಾವಧಿಯ ಅಂತರದ ಬಳಿಕ ನೇತನ್ಯಾಹು ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುವುದು ಖಚಿತವಾಗಿದೆ.ಇವರು ಹಿಂದೆ, 1996 ರಿಂದ 1999 ಮತ್ತು 2020ರಲ್ಲೂ ಪ್ರಧಾನಿಯಾಗಿದ್ದರು.

ನೇತನ್ಯಾಹು ನೇತೃತ್ವದ ಲಿಕುಡ್‌ ಪಾರ್ಟಿ 32 ಸ್ಥಾನ ಗೆದ್ದಿದ್ದರೆ, ನಿರ್ಗಮಿತ ಪ್ರಧಾನಿ ಯಾಯಿರ್ ಲ್ಯಾಪಿಡ್‌ ನೇತೃತ್ವದ ಯೆಷ್‌ ಅಟಿಡ್ 24 ಸ್ಥಾನ ಗೆದ್ದಿದೆ. ಬಲಪಂಥೀಯ ರಿಲಿಜೀಯಸ್‌ ಜಿಯೊನಿಸಂ ಪಾರ್ಟಿ 14 ಸ್ಥಾನ ಗೆದ್ದು, ಅನಿರೀಕ್ಷಿತ ಫಲಿತಾಂಶ ನೀಡಿದೆ.

ADVERTISEMENT

ಮೈತ್ರಿಕೂಟದ ಇತರೆ ಭಾಗಿದಾರ ಪಕ್ಷಗಳಾದ ಶಾಸ್‌ ಮತ್ತು ಯುನೈಟೆಡ್‌ ತೊರ‍್ಹಾ ಜುದೈಸಂ ಕ್ರಮವಾಗಿ 11 ಮತ್ತು 7 ಸ್ಥಾನ ಗೆದ್ದಿವೆ. ಉಳಿದಂತೆ ನ್ಯಾಷನಲ್ ಯೂನಿಟಿ 12 ಮತ್ತು ಲೀಬರ್ಮನ್‌ ಪಕ್ಷ 6 ಸ್ಥಾನ ಗೆದ್ದಿದೆ.

2019ರಲ್ಲಿ ಪ್ರಧಾನಿ ನೇತನ್ಯಾಹು ವಿರುದ್ಧ ಲಂಚ, ವಂಚನೆ ಆರೋಪ ಕೇಳಿಬಂದಿತ್ತು.ಆ ನಂತರ ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ ರಾಜಕೀಯ ಅನಿಶ್ಚಿತತೆ ಮೂಡಿದೆ. ಆ ನಂತರ ನಾಲ್ಕು ಚುನಾವಣೆ ನಡೆದಿದ್ದು, ಅತಂತ್ರ ಸರ್ಕಾರ ರಚನೆಯಾಗಿತ್ತು. ಈಗ ನಡೆದಿರುವುದು 5ನೇ ಚುನಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.