ADVERTISEMENT

ಬ್ರಿಟನ್‌ನಲ್ಲಿ ಪತ್ತೆಯಾದ ಓಮೈಕ್ರಾನ್‌ ಹೊಸ ತಳಿ; ವೇಗ ತೀವ್ರ: ಡಬ್ಲ್ಯುಎಚ್‌ಒ

ಪಿಟಿಐ
Published 3 ಏಪ್ರಿಲ್ 2022, 2:55 IST
Last Updated 3 ಏಪ್ರಿಲ್ 2022, 2:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂಗ್ಲೆಂಡ್‌ನಲ್ಲಿ ಪತ್ತೆಯಾದ ಓಮೈಕ್ರಾನ್‌ನ ರೂಪಾಂತರಿ ತಳಿ ಈ ಹಿಂದಿನ ಯಾವುದೇ ಕೋವಿಡ್-19 ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಕೋವಿಡ್-19 ಮೇಲಿನ ಕಣ್ಗಾವಲನ್ನು ಕಡಿಮೆ ಮಾಡುವುದಕ್ಕೆ ಇದು ಸಕಾಲವಲ್ಲ ಎಂದು ಎಚ್ಚರಿಸಿದೆ.

ಎಕ್ಸ್‌ಇ (XE) ಎಂದು ಕರೆಯಲಾಗುವ ಹೊಸ ರೂಪಾಂತರ (BA.1-BA.2) ಜ. 19 ರಂದು ಇಂಗ್ಲೆಂಡ್‌ನಲ್ಲಿ ಮೊದಲು ಪತ್ತೆಯಾಯಿತು ಮತ್ತು ನಂತರ 600ಕ್ಕೂ ಹೆಚ್ಚು ತಳಿಗಳು ವರದಿಯಾಗಿವೆ. ಬಿಎ.2 ಗೆ ಹೋಲಿಸಿದರೆ 10 ಪ್ರತಿಶತದಷ್ಟು ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಈ ಸಂಶೋಧನೆಗೆ ಹೆಚ್ಚಿನ ದೃಢೀಕರಣದ ಅಗತ್ಯವಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.

'SARS-CoV-2 ನೊಂದಿಗೆ ಇತರ ರೂಪಾಂತರಗಳಿಗೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯದ ಅಪಾಯಕ್ಕೆ ಸಂಬಂಧಿಸಿದಂತೆ ನಿಗಾವಹಿಸುವುದು, ವಿಶ್ಲೇಷಣೆಗೆ ಒಳಪಡಿಸುವುದನ್ನು ಡಬ್ಲ್ಯುಎಚ್ಒ ಮುಂದುವರೆಸಿದೆ. ಈ ಸಂಬಂಧ ಹೆಚ್ಚಿನ ಪುರಾವೆಗಳು ಲಭ್ಯವಾದಂತೆ ಮಾಹಿತಿ ನೀಡಲಿದೆ' ಎಂದು ಹೇಳಿದೆ.

ADVERTISEMENT

ಬುಧವಾರ ಬಿಡುಗಡೆಯಾದ ಕೋವಿಡ್-19 ಸಾಂಕ್ರಾಮಿಕ ಪ್ರಕರಣಗಳ ಮಾಹಿತಿ ಪ್ರಕಾರ, ಕಳೆದ ವಾರ ಕೋವಿಡ್-19ನಿಂದಾದ ಸಾವುಗಳು ಶೇ 43ರಷ್ಟು ಹೆಚ್ಚಾಗಿದೆ. ಇದು ಭಾರತದಿಂದ ವರದಿಯಾದ ಹಿಂದಿನ ಮಾಹಿತಿಗಳು ಸೇರಿದಂತೆ ಇತರೆ ಅಂಶಗಳಿಂದ ಪ್ರೇರಿತವಾಗಿದೆ.

2022ರ ಜನವರಿ ಅಂತ್ಯ ಮತ್ತು ಮಾರ್ಚ್ ನಡುವೆ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಅದಾದ ನಂತರ ಸತತ ಎರಡು ವಾರಗಳ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಾರ್ಚ್ 21 ರಿಂದ 27 ರ ವಾರದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 14 ರಷ್ಟು ಇಳಿಕೆಯೊಂದಿಗೆ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಕಡಿಮೆಯಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.

ಡಬ್ಲ್ಯುಎಚ್ಒದ ಆರು ಪ್ರದೇಶಗಳಲ್ಲಿ, 10 ಕೋಟಿಗೂ ಹೆಚ್ಚು ಹೊಸ ಪ್ರಕರಣಗಳು ಮತ್ತು 45,000 ಕ್ಕೂ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.