ADVERTISEMENT

ಎಬೋಲಾ ವೈರಸ್‌ಗೆ ಔಷಧಿ ಕಂಡುಹಿಡಿದ ವಿಜ್ಞಾನಿಗಳು

ಪಿಟಿಐ
Published 10 ಜನವರಿ 2019, 20:15 IST
Last Updated 10 ಜನವರಿ 2019, 20:15 IST

ಹ್ಯೂಸ್ಟನ್‌: ಎಬೋಲಾ ವೈರಸ್‌ಗೆ ವಿಜ್ಞಾನಿಗಳು ಔಷಧಿ ಕಂಡುಹಿಡಿದಿದ್ದು, ಅದನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಒಂದೇ ಡೋಸ್‌ನಲ್ಲಿ ಈ ಮದ್ದು ನೀಡಿದರೆ, ಎಬೋಲಾ ವೈರಸ್‌ ಸೋಂಕಿನಿಂದ ಮುಕ್ತರಾಗಬಹುದು ಎಂದು ಅವರು ಹೇಳಿದ್ದಾರೆ.

‘ಒಂದು ರೋಗ, ಒಂದು ಔಷಧಿ (ಒನ್‌ ಬಗ್‌, ಒನ್‌ ಡ್ರಗ್‌) ಮಾದರಿಯಲ್ಲಿ ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದೇವೆ’ ಎಂದು ಟೆಕ್ಸಾಸ್‌ ವಿಶ್ವವಿದ್ಯಾಲಯ ವೈದ್ಯಕೀಯ ವಿಭಾಗದ ಥಾಮಸ್‌ ಗೀಸ್ಬರ್ಟ್‌ ಹೇಳಿದರು.

ADVERTISEMENT

‘ಎಬೋಲಾ ವೈರಸ್‌ನಿಂದ ಮನುಷ್ಯ ಅನುಭವಿಸುವ ಎಲ್ಲ ತೊಂದರೆಗಳನ್ನು ಈ ಪ್ರಾಯೋಗಿಕ ಔಷಧವು ನಿವಾರಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.