ADVERTISEMENT

ಬಾಂಗ್ಲಾದೇಶ ಹೊಸ ಪಠ್ಯ: ಸ್ವಾತಂತ್ರ್ಯ ಘೋಷಿಸಿದವರ ಹೆಸರು ಬದಲು

ಪಿಟಿಐ
Published 2 ಜನವರಿ 2025, 14:08 IST
Last Updated 2 ಜನವರಿ 2025, 14:08 IST
   

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಪರಿಚಯಿಸಿದ್ದು, 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದ್ದು ಜಿಯಾವುರ್‌ ರೆಹಮಾನ್‌ ಎಂದು ಉಲ್ಲೇಖಿಸಿದೆ.

ಈ ಹಿಂದೆ ಬಾಂಗ್ಲಾದ ಪಿತಾಮಹ ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರು ಈ ಕುರಿತು ಘೋಷಣೆ ಮಾಡಿದ್ದರು ಎಂದು ಉಲ್ಲೇಖಿಸಲಾಗಿತ್ತು. ಅದನ್ನು ಹೊಸ ಪಠ್ಯದಲ್ಲಿ ಬದಲಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಮುಜಿಬುರ್‌ ರೆಹಮಾನ್‌ ಅವರಿಗಿದ್ದ ರಾಷ್ಟ್ರಪಿತ ಬಿರುದನ್ನು ತೆಗೆದಿರುವುದೂ ಸೇರಿದಂತೆ ಕೆಲ ಬದಲಾವಣೆಗಳನ್ನು ಹೊಸ ಪಠ್ಯದಲ್ಲಿ ಮಾಡಲಾಗಿದೆ ಎಂದು ‘ಡೈಲಿ ಸ್ಟಾರ್‌’ ವರದಿ ಮಾಡಿದೆ.

ADVERTISEMENT

ಬಾಂಗ್ಲಾದೇಶದ ನೋಟುಗಳಲ್ಲಿ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಚಿತ್ರವನ್ನು ಅಳಿಸಲು ಇತ್ತೀಚೆಗೆ ಬಾಂಗ್ಲಾ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಹಳೆಯ ನೋಟುಗಳನ್ನು ಹಂತ ಹಂತವಾಗಿ ರದ್ದುಗೊಳಿಸಲು ತೀರ್ಮಾನಿಸಿದೆ.

ಮುಜಿಬುರ್‌ ರೆಹಮಾನ್‌ ಅವರು ಹತ್ಯೆಯಾದ ದಿನವಾದ ಆಗಸ್ಟ್‌ 15 ಈ ಮೊದಲು ರಾಷ್ಟ್ರೀಯ ರಜಾದಿನ ಆಗಿತ್ತು. ಅದನ್ನೂ ಮಧ್ಯಂತರ ಸರ್ಕಾರ ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.