ನ್ಯೂಯಾರ್ಕ್: ಬುಧವಾರ ರಾತ್ರಿ ಸುರಿದ ಮಹಾಮಳೆಗೆ ನ್ಯೂಯಾರ್ಕ್ ನಗರ ಅಕ್ಷರಶಃ ತತ್ತರಿಸಿದ್ದು, ರಾಜ್ಯದ್ಯಂತ ಅಲ್ಲಿನ ಮೇಯರ್ ಬಿಲ್ ಡಿ ಬ್ಲಿಸಿಯೊ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಮೇಯರ್ ಅವರು ‘ಇದೊಂದು ಐತಿಹಾಸಿಕ ಹವಾಮಾನ ದುರಂತ‘ ಎಂದು ಬಣ್ಣಿಸಿದ್ದಾರೆ.
ಮಳೆ ಹಾಗೂ ಬಿರುಗಾಳಿಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಬೀದಿ ಬೀದಿಗಳಲ್ಲಿ ನೀರು ಹರಿದಿದೆ. ಅಲ್ಲದೇ ಸಬ್‌ವೇ ರೈಲು ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಷ್ಟ್ರೀಯ ಹವಾಮಾನ ಸೇವೆಯಿಂದ ಬುಧವಾರ ಸಂಜೆ ಕನಿಷ್ಠ ಐದು ತುರ್ತು ಪರಿಸ್ಥಿತಿ ಎಚ್ಚರಿಕೆಯನ್ನು ನ್ಯೂಯಾರ್ಕ್ ನಗರಕ್ಕೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.