ADVERTISEMENT

ಬಲಪಂಥೀಯ ಚಳವಳಿ,ಟ್ರಂಪ್‌ ನೀತಿಗಳಿಗೆ ನ್ಯೂಯಾರ್ಕ್‌ ಉತ್ತರ: ಮಾಜಿ ಭಾರತೀಯ ರಾಯಭಾರಿ

ಪಿಟಿಐ
Published 6 ನವೆಂಬರ್ 2025, 16:15 IST
Last Updated 6 ನವೆಂಬರ್ 2025, 16:15 IST
<div class="paragraphs"><p>ಜೊಹ್ರಾನ್ ಮಮ್ದಾನಿ</p></div>

ಜೊಹ್ರಾನ್ ಮಮ್ದಾನಿ

   

ಚಿತ್ರ ಕೃಪೆ: ಎಕ್ಸ್‌

ನವದೆಹಲಿ: ‘ನ್ಯೂಯಾರ್ಕ್‌ ನಗರದ ಮೇಯರ್‌ ಚುನಾವಣೆಯಲ್ಲಿ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರ ಗೆಲುವು, ಅಮೆರಿಕದ ಬಲಪಂಥೀಯ ಚಳವಳಿಗಳಿಗೆ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳಿಗೆ ನ್ಯೂಯಾರ್ಕ್ ನಗರದ ಉತ್ತರವಾಗಿದೆ’ ಎಂದು ಮಾಜಿ ಭಾರತೀಯ ರಾಯಭಾರಿ ವೇಣು ರಾಜಮಣಿ ಹೇಳಿದ್ದಾರೆ.

ADVERTISEMENT

ಅಲ್ಲದೆ, ಇದನ್ನು ‘ಐತಿಹಾಸಿಕ ಗೆಲುವು’ ಎಂದು ಅಂತರರಾಷ್ಟ್ರೀಯ ವ್ಯವಹಾರಗಳ ತಜ್ಞರು ಬಣ್ಣಿಸಿದ್ದಾರೆ.

‘ಮಮ್ದಾನಿ ಅವರು ನ್ಯೂಯಾರ್ಕ್‌ ನಗರದ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿಷಯವನ್ನೇ ಎತ್ತಿಕೊಂಡು ಚುನಾವಣೆಯನ್ನು ಎದುರಿಸಿದರು. ಇದು ಸಹ ಗೆಲುವಿಗೆ ಪ್ರಮುಖ ಕಾರಣವಾಯಿತು’ ಎಂದು ಮಾಜಿ ರಾಯಭಾರಿ ಅಶೋಕ್‌ ಕಾಂತಾ ಹೇಳಿದ್ದಾರೆ.

‘ಟ್ರಂಪ್‌ ಅವರು ಆ್ಯಂಡ್ರ್ಯೂ ಕೌಮೊ ಅವರನ್ನು ಬಹಿರಂಗವಾಗಿ ಬೆಂಬಲಿಸಿದರು. ಆದರೆ ಜನರು ಮಮ್ದಾನಿ ಅವರಿಗೆ ಮತ ಹಾಕಿದರು. ಉಚಿತ ಸಾರಿಗೆ ಮತ್ತು ಬಡವರಿಗೆ ವಸತಿ ಸೇರಿದಂತೆ ಮಮ್ದಾನಿ ಮಂಡಿಸಿರುವ ಸಮಾಜವಾದಿ ಕಾರ್ಯಸೂಚಿಯೂ ಅಷ್ಟೇ ಮುಖ್ಯವಾಗಿದೆ’ ಎಂದು ವೇಣು ರಾಜಮಣಿ ತಿಳಿಸಿದ್ದಾರೆ.

‘ಪ್ರಚಾರದ ಸಮಯದಲ್ಲಿ ಮಮ್ದಾನಿ ನೀಡಿದ ಮಹತ್ವಾಕಾಂಕ್ಷೆಯ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ’ ಎಂದೂ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.