
ಪ್ರಜಾವಾಣಿ ವಾರ್ತೆವಿಶ್ವದ ಆರ್ಥಿಕ ನಗರ ಎನಿಸಿರುವ ಅಮೆರಿಕದ ನ್ಯೂಯಾರ್ಕ್‌ನಲ್ಲೀಗ ಹೊಸ ಶಕೆ ಆರಂಭವಾಗಿದೆ. ಅಲ್ಲಿಯ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ನೂತನ ಮೇಯರ್ ಆಗುವ ಮೂಲಕ ಹೊಸ ರಾಜಕೀಯ ಇತಿಹಾಸ ಬರೆದಿದ್ದಾರೆ. 34 ವರ್ಷದ ಮಮ್ದಾನಿ, ನ್ಯೂಯಾರ್ಕ್‌ನ ಮೊದಲ ದಕ್ಷಿಣ ಏಷ್ಯನ್, ಮೊದಲ ಮುಸ್ಲಿಂ ಹಾಗೂ ಅತಿ ಕಿರಿಯ ಮೇಯರ್ ಎನಿಸಿದ್ದಾರೆ. ನ್ಯೂಯಾರ್ಕ್ ವಲಸಿಗರ ನಗರವಾಗಿಯೇ ಉಳಿಯಲಿದೆ. ನಾವು ಬದಲಾವಣೆಯ ಹೊಸ ಯುಗವನ್ನು ತರಲಿದ್ದೇವೆ ಎಂಬ ಭರವಸೆ ಮೂಲಕ ಜನರ ವಿಶ್ವಾಸ ಗಳಿಸಿದ್ದ ಅವರು ಅದನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.