ADVERTISEMENT

ನ್ಯೂಜಿಲ್ಯಾಂಡ್: ಹಿಜಾಬ್‌‘ ಧರಿಸಿದ ಮೊದಲ ಮುಸ್ಲಿಂ ಮಹಿಳಾ ಕಾನ್‌ಸ್ಟೆಬಲ್‌

ನ್ಯೂಜಿಲ್ಯಾಂಡ್ ಸರ್ಕಾರದ ಹೊಸ ಪ್ರಯತ್ನ

ಪಿಟಿಐ
Published 18 ನವೆಂಬರ್ 2020, 11:55 IST
Last Updated 18 ನವೆಂಬರ್ 2020, 11:55 IST
ಮಹಿಳಾ ಕಾನ್ಸ್‌ಸ್ಟೆಬಲ್ ಜೀನಾ ಆಲಿ
ಮಹಿಳಾ ಕಾನ್ಸ್‌ಸ್ಟೆಬಲ್ ಜೀನಾ ಆಲಿ   

ಮೆಲ್ಬರ್ನ್: ನ್ಯೂಜಿಲೆಂಡ್‌ನ ಸರ್ಕಾರ ಮೊದಲಬಾರಿಗೆ ಪೊಲೀಸ್ ಪಡೆಯ ಸಮವಸ್ತ್ರದ ಭಾಗವಾಗಿ ಪರಿಚಯಿಸಿರುವ ವಿಶೇಷ ವಿನ್ಯಾಸದ ಹಿಜಾಬ್‌ (ತಲೆಗವಸು)ಅನ್ನು ಮೊದಲ ಮಹಿಳಾ ಕಾನ್ಸ್‌ಸ್ಟೆಬಲ್ ಜೀನಾ ಆಲಿ ಧರಿಸಿದರು.

ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರುವಂತೆ ಪ್ರೋತ್ಸಾಹಿಸುವ ಸಲುವಾಗಿ ನ್ಯೂಜಿಲೆಂಡ್ ಸರ್ಕಾರ ಮಹಿಳಾ ಪೊಲೀಸರಿಗಾಗಿ ಈ ವಿಶೇಷ ಹಿಜಾಬ್‌ ವಿನ್ಯಾಸಗೊಳಿಸಿ ಪರಿಚಯಿಸಿದೆ.

ಕಳೆದ ವರ್ಷ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 51 ಮಂದಿ ಹತ್ಯೆ ಮಾಡಿದ ಪ್ರಕರಣದ ಬೆನ್ನಲ್ಲೇ, ಮುಸ್ಲಿಂ ಸಮುದಾಯಕ್ಕೆ ನೆರವಾಗಲು ಜೀನಾ (30) ಪೊಲೀಸ್ ಇಲಾಖೆಗೆ ಸೇರಿದ್ದಾರೆ.

ADVERTISEMENT

ಜೀನಾ, ಮೊದಲ ಪದವೀಧರ ಪೊಲೀಸ್ ಅಧಿಕಾರಿ ಮಾತ್ರವಲ್ಲ, ನ್ಯೂಜಿಲೆಂಡ್‌ನಲ್ಲಿ ಪೊಲೀಸ್ ಪಡೆಯ ಸಮವಸ್ತ್ರದ ಭಾಗವಾದ ಹಿಜಾಬ್‌ ಧರಿಸಿದ ಮುಸ್ಲಿಂ ಸಮುದಾಯದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ‘ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

ಜೀನಾ, ತನ್ನ ಧರ್ಮ ಮತ್ತು ಕರ್ತವ್ಯಕ್ಕೆ ಅನುಕೂಲವಾಗುವಂತೆ ಹಿಜಾಬ್‌ ವಿನ್ಯಾಸಗೊಳಿಸಲು ಪೊಲೀಸರೊಂದಿಗೆ ಕೆಲಸ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

‘ವಿನ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದರಿಂದ ಹೊರಗಿನ ಜನರಿಗೆ ನ್ಯೂಜಿಲೆಂಡ್ ಪೊಲೀಸ್ ಸಮವಸ್ತ್ರ ಹಿಜಾಬ್ ಅನ್ನು ತೋರಿಸಲು ಸಾಧ್ಯವಾಯಿತು‘ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.