
ಪ್ರಜಾವಾಣಿ ವಾರ್ತೆ
ಲಾಗೋಸ್ (ನೈಜೀರಿಯ): ಇಸ್ಲಾಮಿಕ್ ಬಂಡುಕೋರರನ್ನು ಹೆಡೆಮುರಿ ಕಟ್ಟುವುದಕ್ಕಾಗಿ ಹೊಸದಾಗಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುವುದಾಗಿ ನೈಜೀರಿಯಾ ಸರ್ಕಾರ ಘೋಷಿಸಿದೆ.
ಮೂಲಭೂತವಾದವನ್ನು ತಿರಸ್ಕರಿಸಿದ್ದಕ್ಕಾಗಿ ಪಶ್ಚಿಮ ಭಾಗದಲ್ಲಿನ ಕ್ವಾರಾ ರಾಜ್ಯದಲ್ಲಿ 160ಕ್ಕೂ ಹೆಚ್ಚು ಜನರನ್ನು ಬಂಡುಕೋರರು ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ, ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
ವೊರೊ ಹಾಗೂ ನುಕು ಎಂಬ ಗ್ರಾಮದಲ್ಲಿ ಬಂಡಕೋರರು ಮಂಗಳವಾರ ದಾಳಿ ನಡೆಸಿದ್ದು, ಗ್ರಾಮಗಳಲ್ಲಿನ ಮನೆಗಳು–ಅಂಗಡಿಗಳಿಗೆ ನುಗ್ಗಿ ಲೂಟಿ ಮಾಡಿದ್ದಾರೆ. ಜತೆಗೆ 162 ಮಂದಿಯನ್ನು ಹತ್ಯೆಗೈದಿದ್ದಾರೆ. ಈ ಕೃತ್ಯದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲವಾದರೂ ನೈಜೀರಿಯಾದ ಬೊಕೊ ಹರಾಮ್ ಸೇರಿದಂತೆ ಇನ್ನಿತರ ಇಸ್ಲಾಮಿಕ್ ಉಗ್ರ ಸಂಘಟನೆಗಳೇ ಕೃತ್ಯ ಎಸಗಿವೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.