ADVERTISEMENT

ಲಂಡನ್‌ನಲ್ಲಿ ಲಾರಿ ಹರಿದು ಭಾರತ ಮೂಲದ ಪಿಎಚ್‌.ಡಿ ವಿದ್ಯಾರ್ಥಿನಿ ಸಾವು

ನೀತಿ ಆಯೋಗದ ಮಾಜಿ ಉದ್ಯೋಗಿಯಾಗಿದ್ದ ಚೇಸ್ತಾ ಕೊಚ್ಚಾರ ಸಾವು

ಪಿಟಿಐ
Published 25 ಮಾರ್ಚ್ 2024, 9:45 IST
Last Updated 25 ಮಾರ್ಚ್ 2024, 9:45 IST
<div class="paragraphs"><p>ಚೇಸ್ತಾ ಕೊಚ್ಚಾರ</p></div>

ಚೇಸ್ತಾ ಕೊಚ್ಚಾರ

   

X ಅಮಿತಾಬ್ ಕಾಂತ್

ಲಂಡನ್‌: ಲಂಡನ್‌ನಲ್ಲಿ ಇತ್ತೀಚೆಗೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬರು ಮೃತರಾಗಿದ್ದಾರೆ.

ADVERTISEMENT

ನೀತಿ ಆಯೋಗದ ಮಾಜಿ ಉದ್ಯೋಗಿಯಾಗಿದ್ದ ಹಾಗೂ ಸದ್ಯ ಲಂಡನ್‌ನ ‘ಲಂಡನ್‌ ಸ್ಕೂಲ್ ಆಫ್ ಎಕಾನಾಮಿಕ್ಸ್‌’ನಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ ಚೇಸ್ತಾ ಕೊಚ್ಚಾರ (36) ಚಿಕಿತ್ಸೆ ಫಲಿಸದೇ ಭಾನುವಾರ ಮೃತರಾಗಿದ್ದಾರೆ.

ಮಾರ್ಚ್ 19ರಂದು ಕಾಲೇಜಿನಿಂದ ಸೈಕಲ್‌ನಲ್ಲಿ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ಚೇಸ್ತಾ ಅವರ ಮೇಲೆ ಫ್ಯಾರಿಂಗ್‌ಡನ್ ಜಂಕ್ಸನ್‌ನ ಕ್ಲರ್ಕ್‌ಎನ್‌ವೆಲ್ ರಸ್ತೆ ಬಳಿ ಲಾರಿಯೊಂದು ಹರಿದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲಂಡನ್ ಮೆಟ್ರೊಪಾಲಿಟನ್ ಪೊಲೀಸರು, ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಚೇಸ್ತಾ ಅವರ ತಂದೆ ಭಾರತೀಯ ಸೇನೆಯ ಲೆಫ್ಟಿನಂಟ್ ಜನರಲ್ ಎಸ್‌.ಪಿ. ಕೊಚ್ಚಾರ ಅವರು, ಮಗಳ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಭಾವಂತೆಯಾಗಿದ್ದ ಚೇಸ್ತಾ ನೀತಿ ಆಯೋಗದಲ್ಲಿ ನಮ್ಮ ಜೊತೆ ಕೆಲಸ ಮಾಡಿದ್ದರು ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಸ್ಮರಿಸಿದ್ದಾರೆ.

ಚೇಸ್ತಾ ಕೊಚ್ಚಾರ ಅವರು ಗುರುಗ್ರಾಮ ಮೂಲದವರು. ಅವರು ಪತಿ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಗೌತಮ್ ಅವರನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.