ADVERTISEMENT

ಚೀನಾದಲ್ಲಿಯೇ ಕೋವಿಡ್‌ ಉಗಮ: ಖಚಿತ ಮಾಹಿತಿ ಇಲ್ಲ– ಅಮೆರಿಕ

ಪಿಟಿಐ
Published 28 ಫೆಬ್ರುವರಿ 2023, 10:56 IST
Last Updated 28 ಫೆಬ್ರುವರಿ 2023, 10:56 IST
ಜಾನ್‌ ಕಿರ್ಬಿ
ಜಾನ್‌ ಕಿರ್ಬಿ   

ವಾಷಿಂಗ್ಟನ್: ಚೀನಾದ ಪ್ರಯೋಗಾಲಯವೊಂದರಿಂದ ಕೊರೊನಾ ವೈರಸ್‌ನ ಸೋಂಕು ಪ್ರಸರಣವಾಗಿತ್ತು ಎಂಬುದಾಗಿ ಖಚಿತವಾಗಿ ಹೇಳಲು ಸಾಧ್ಯ ಇಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಕಾರ (ಕಾರ್ಯತಂತ್ರ ಸಂವಹನ) ಜಾನ್ ಕಿರ್ಬಿ ಹೇಳಿದ್ದಾರೆ.

‘ಗುಪ್ತಚರ ಸಂಸ್ಥೆ ಹಾಗೂ ಇತರ ಇಲಾಖೆಗಳು ಈ ವಿಷಯ ಕುರಿತು ಪರಿಶೀಲನೆಯನ್ನು ಮುಂದುವರಿಸಿವೆ. ಈ ಬಗ್ಗೆ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಚೀನಾದ ಪ್ರಯೋಗಾಲಯವೊಂದರಿಂದಲೇ ಕೊರೊನಾ ವೈರಸ್‌ ಸೋರಿಕೆಯಾಗಿರುವ ಸಾಧ್ಯತೆ ಹೆಚ್ಚು’ ಎಂಬುದಾಗಿ ಅಮೆರಿಕದ ಇಂಧನ ಇಲಾಖೆ ಇತ್ತೀಚೆಗೆ ವರದಿ ಮಾಡಿತ್ತು. ಅಲ್ಲದೇ, ಶ್ವೇತಭವನಕ್ಕೆ ಗುಪ್ತಚರ ಇಲಾಖೆಯು ಸಲ್ಲಿಸಿದ್ದ ಮಾಹಿತಿಯನ್ನು ಆಧರಿಸಿ ವಾಲ್‌ ಸ್ಟ್ರೀಟ್‌ ಜರ್ನಲ್ ನಿಯತಕಾಲಿಕವೂ ಇದೇ ಅಭಿಪ್ರಾಯವಿದ್ದ ವರದಿಯನ್ನು ಭಾನುವಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ, ಜಾನ್ ಕಿರ್ಬಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ಅಧ್ಯಕ್ಷ ಜೋ ಬೈಡನ್‌ ಅವರು ವಾಸ್ತವಾಂಶಗಳಿಂದ ಕೂಡಿದ ಮಾಹಿತಿಯನ್ನು ಬಯಸುತ್ತಾರೆ. ಅಲ್ಲದೇ, ಕೋವಿಡ್‌ ಉಗಮವನ್ನು ಪತ್ತೆ ಹಚ್ಚುವುದೇ ನನ್ನ ಆದ್ಯತೆ ಎಂಬುದಾಗಿ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಘೋಷಿಸಿದ್ದರು. ಈ ಕಾರಣಕ್ಕೆ, ಇಡೀ ಆಡಳಿತವನ್ನೇ ಅವರು ಈ ಕಾರ್ಯದಲ್ಲಿ ತೊಡಗಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.