ADVERTISEMENT

ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ನಿಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 9:33 IST
Last Updated 18 ಅಕ್ಟೋಬರ್ 2025, 9:33 IST
<div class="paragraphs"><p>ಚೆನ್ ನಿಂಗ್ ಯಾಂಗ್</p></div>

ಚೆನ್ ನಿಂಗ್ ಯಾಂಗ್

   

ಬೀಜಿಂಗ್‌: ನೊಬೆಲ್‌ ಪುರಸ್ಕೃತ ಭೌತವಿಜ್ಞಾನಿ, ಶತಾಯುಷಿ ಚೆನ್ ನಿಂಗ್ ಯಾಂಗ್‌ (103) ಶನಿವಾರ ನಿಧನರಾಗಿದ್ದಾರೆ.

ಚೀನಾದ ಪೂರ್ವ ಭಾಗದಲ್ಲಿರುವ ಅನ್ಹುಯಿ ಪ್ರಾಂತ್ಯದ ಹೆಫೆಯಲ್ಲಿ 1922ರಲ್ಲಿ ಜನಿಸಿದ್ದ ಚೆನ್‌, 1940ರ ದಶಕದಲ್ಲಿ ಶೈಕ್ಷಣಿಕ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. 1957ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್‌ ಪುರಸ್ಕಾರ ಪಡೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ಇಪ್ಪತ್ತನೇ ಶತಮಾನದ ಶ್ರೇಷ್ಠ ಭೌತವಿಜ್ಞಾನಿಗಳಲ್ಲಿ ಯಾಂಗ್‌ ಒಬ್ಬರು’ ಎಂದು ಶಾಂಘೈ ಇನ್‌ಸ್ಟಿಟ್ಯೂಟ್‌ ಫಾರ್ ಅಡ್ವಾನ್ಸ್ಡ್‌ ಸ್ಟಡೀಸ್‌ನ ವಿಲ್ಜೆಕ್‌ ಕ್ವಾಂಟಮ್‌ ಸೆಂಟರ್‌ನ ಭೌತಶಾಸ್ತ್ರದ ಪ್ರಾಧ್ಯಾಪಕರು ಮತ್ತು ಸಹಾಯಕ ನಿರ್ದೇಶಕರಾದ ಶಿ ಯು ಹೇಳಿದ್ದಾರೆ.

‘ಯಾಂಗ್–ಮಿಲ್ಸ್‌ ಸಿದ್ಧಾಂತವಿಲ್ಲದೆ ಯಾವುದೇ ಪ್ರಮಾಣಿತ ಮಾದರಿ ಇರಲು ಸಾಧ್ಯವಿಲ್ಲ’ ಎಂದು ಅವರು ‘ದಿ ಪೋಸ್ಟ್‌’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.