ADVERTISEMENT

ಉತ್ತರ ಕೊರಿಯಾದಿಂದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 10:52 IST
Last Updated 9 ಅಕ್ಟೋಬರ್ 2022, 10:52 IST
ಉತ್ತರ ಕೊರಿಯಾ ನಡೆಸಿದ ಕ್ಷಿಪಣಿಗಳ ಪ್ರಯೋಗ ಕುರಿತು ಸುದ್ದಿಯನ್ನು ಸೋಲ್‌ನಲ್ಲಿ ಜನರು ಟಿ.ವಿ.ಪರದೆಯಲ್ಲಿ ವೀಕ್ಷಿಸಿದರು –ಎಎಫ್‌ಪಿ ಚಿತ್ರ
ಉತ್ತರ ಕೊರಿಯಾ ನಡೆಸಿದ ಕ್ಷಿಪಣಿಗಳ ಪ್ರಯೋಗ ಕುರಿತು ಸುದ್ದಿಯನ್ನು ಸೋಲ್‌ನಲ್ಲಿ ಜನರು ಟಿ.ವಿ.ಪರದೆಯಲ್ಲಿ ವೀಕ್ಷಿಸಿದರು –ಎಎಫ್‌ಪಿ ಚಿತ್ರ   

ಸೋಲ್‌ (ಎ.ಪಿ): ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸದ ಹಿಂದೆಯೇ ಉತ್ತರ ಕೊರಿಯಾ ಭಾನುವಾರ ಸಮುದ್ರ ಭಾಗವನ್ನು ಗುರಿಯಾಗಿಸಿ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದೆ.

ಈ ಕುರಿತು ದಕ್ಷಿಣ ಕೊರಿಯಾದ ಸಿಬ್ಬಂದಿಯ ಜಂಟಿ ಮುಖ್ಯಸ್ಥರು ಹೇಳಿಕೆ ನೀಡಿದ್ದು, ಪೂರ್ವ ಕರಾವಳಿಯಲ್ಲಿನ ಮುಂಚೋನ್ ನಗರ ಭಾಗದಿಂದ ಎರಡು ಕ್ಷಿಪಣಿಗಳ ಪ್ರಯೋಗ ನಡೆದಿರುವುದನ್ನು ಸೇನೆ ಗಮನಿಸಿದೆ ಎಂದು ಹೇಳಿದರು.

ಅಲ್ಲದೆ, ದಕ್ಷಿಣ ಕೊರಿಯಾವು ತನ್ನ ಗಡಿಭಾಗದಲ್ಲಿಅಮೆರಿಕದ ಸಹಯೋಗದಲ್ಲಿ ಸೇನಾ ಕಣ್ಗಾವಲು ಕಾರ್ಯವನ್ನು ಚುರುಕುಗೊಳಿಸಿದೆ. ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದರು.

ADVERTISEMENT

ಕ್ಷಿಪಣಿಗಳ ಪ್ರಯೋಗ ಕುರಿತಂತೆ ಲಭ್ಯ ಮಾಹಿತಿಗಳ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ತನ್ನ ಯುದ್ಧ ವಿಮಾನ ಮತ್ತು ಹಡಗುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಪಾನಿನ ಪ್ರಧಾನಿ ಫುಮಿಯೊ ಕಿಷಿದಾ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.