ADVERTISEMENT

ಚೀನಾ ಜತೆ ವ್ಯಾಪಾರ ಒಪ್ಪಂದದಿಂದ ನಿರಾಶೆ: ಟ್ರಂಪ್‌

ಕೊರೊನಾ ವೈರಸ್‌ ಹಬ್ಬಲು ಅವಕಾಶ ಕಲ್ಪಿಸಿದ್ದೇಕೆ: ಚೀನಾ ವಿರುದ್ಧ ಕಿಡಿ

ಪಿಟಿಐ
Published 21 ಮೇ 2020, 5:56 IST
Last Updated 21 ಮೇ 2020, 5:56 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌ : ಚೀನಾ ಜತೆಗಿನ ಮಹತ್ವದ ವ್ಯಾಪಾರ ಒಪ್ಪಂದ ಐತಿಹಾಸಿಕ ಎಂದು ಈ ಹಿಂದೆ ಬಣ್ಣಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ಚೀನಾ ಜತೆಗಿನ ವ್ಯಾಪಾರ ಒಪ್ಪಂದ ಅಪಾರ ನಿರಾಶೆ ಮೂಡಿಸಿದೆ. ಈಗ ಅದು ವಿಭಿನ್ನ ರೀತಿಯಲ್ಲಿ ಕಾಣಿಸುತ್ತಿದೆ. ಮೂರು ತಿಂಗಳ ಹಿಂದೆ ಮಾಡಿಕೊಂಡ ಒಪ್ಪಂದ ಏನಾಗುತ್ತದೆ ನೋಡೋಣ. ಆದರೆ, ಈ ರೀತಿ ಆಗಬಾರದಿತ್ತು‘ ಎಂದು ಟ್ರಂಪ್‌ ಹೇಳಿದ್ದಾರೆ.

’ಚೀನಾ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ತೀವ್ರ ಉತ್ಸುಕನಾಗಿದ್ದೆ. ಆದರೆ, ವೈರಸ್‌ ಹಬ್ಬಿದ ಮೇಲೆ ಪರಿಸ್ಥಿತಿಗಳು ಬದಲಾಗಿವೆ‘ ಎಂದು ಹೇಳಿದ್ದಾರೆ.

ADVERTISEMENT

’ವೈರಸ್‌ ಹಬ್ಬಲು ಚೀನಾ ಏಕೆ ಅವಕಾಶ ಮಾಡಿಕೊಟ್ಟಿತು. ಚೀನಾದ ಇತರ ಭಾಗಗಳಲ್ಲಿ ಅದು ಏಕೆ ಹಬ್ಬಲಿಲ್ಲ. ವುಹಾನ್‌ನಿಂದ ಇತರ ಸ್ಥಳಗಳಿಗೆ ಹಬ್ಬದಂತೆ ಯಾವುದೇ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ. ಇತರ ರಾಷ್ಟ್ರಗಳಿಗೆ ವುಹಾನ್‌ನಿಂದ ಹೇಗೆ ಹಬ್ಬಿತು‘ ಎಂದು ಅವರು ಪ್ರಶ್ನಿಸಿದ್ದಾರೆ.

ಜನವರಿಯಲ್ಲಿ ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.