ADVERTISEMENT

ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ

ಏಜೆನ್ಸೀಸ್
Published 29 ಮಾರ್ಚ್ 2021, 9:15 IST
Last Updated 29 ಮಾರ್ಚ್ 2021, 9:15 IST
ಸಾರಾ ಒಬಾಮಾ (ಸಂಗ್ರಹ ಚಿತ್ರ)
ಸಾರಾ ಒಬಾಮಾ (ಸಂಗ್ರಹ ಚಿತ್ರ)   

ನೈರೋಬಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತಂದೆ ಬರಾಕ್‌ ಒಬಾಮಾ ಸೀನಿಯರ್‌ ಅವರನ್ನು ಪೋಷಿಸಿ, ಬೆಳೆಸಿದ್ದ ಅಜ್ಜಿ ಕಿನ್ಯಾದ ಸಾರಾ ಒಬಾಮಾ(99) ಅವರು ವಯೋಸಹಜ ಅನಾರೋಗ್ಯದಿಂದ ಪಶ್ಚಿಮ ಕೀನ್ಯಾದಲ್ಲಿ ನಿಧನರಾದರು.

‘ಇಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಆಕೆ ಭಗವಂತನಲ್ಲಿ ಲೀನವಾಗಿದ್ದಾಳೆ‘ ಎಂದು ಪುತ್ರಿ ಮಾರ್ಸಾಟ್‌ ಒನ್ಯಾಂಗೊ ಹೇಳಿದರು.

ಮಾಮಾ ಸಾರಾ ಎಂದೇ ಜನಪ್ರಿಯರಾಗಿದ್ದ ಸಾರಾ ಒಬಾಮಾ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಬರಾಕ್‌ ಒಬಾಮ ಅವರ ಅಜ್ಜನ ಎರಡನೇ ಹೆಂಡತಿಯಾಗಿರುವ ಸಾರಾ ಅವರು ಒಬಾಮಾ ಅವರ ತಂದೆಯನ್ನು ‌ಸೈಕಲ್‌ನಲ್ಲಿ ಕೂರಿಸಿಕೊಂಡು 9 ಕಿ.ಮೀ.ದೂರದ ಶಾಲೆಗೆ ಬಿಟ್ಟುಬರುತ್ತಿದ್ದರು. ತನಗೆ ಸಿಗದ ಶಿಕ್ಷಣ ತನ್ನ ಮಕ್ಕಳಿಗೆ ಸಿಗದೆ ಅನ್ಯಾಯವಾಗಬಾರದು ಎಂಬ ಕಾಳಜಿಯಿಂದ ಅವರು ಕಿನ್ಯಾದ ಕೊಗೆಲೊ ಎಂಬ ಹಳ್ಳಿಯಿಂದ ನೆಗಿಯಾ ಎಂಬ ಪಟ್ಟಣಕ್ಕೆ ಒಬಾಮ ಅವರನ್ನು ಕರೆತರುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದರು.

ADVERTISEMENT

ಬರಾಕ್‌ ಅವರು ತಮ್ಮ ಅಜ್ಜಿ ಸಾರಾ ಅವರ ಶಿಕ್ಷಣ ಪ್ರೀತಿ, ತ್ಯಾಗವನ್ನು ಹಲವು ಬಾರಿ ಹೇಳಿಕೊಂಡಿದ್ದರು. 2009ರ ಮೊದಲ ಅವಧಿಯ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.