ADVERTISEMENT

ಮುಂಬರುವ ವಾರಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗುವ ಸಾಧ್ಯತೆ: ಡಬ್ಲ್ಯುಎಚ್‌ಓ

ಪಿಟಿಐ
Published 19 ಜನವರಿ 2022, 18:47 IST
Last Updated 19 ಜನವರಿ 2022, 18:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಶ್ವಸಂಸ್ಥೆ/ಜಿನೀವಾ: ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ ಕ್ಷಿಪ್ರವಾಗಿ ಹರಡುತ್ತಿದೆ. ಈ ನಡುವೆರಜಾದಿನಗಳಲ್ಲಿ ಹೆಚ್ಚಿದ ಸಾಮಾಜಿಕ ಚಟುವಟಿಕೆಗಳು ಮತ್ತು ಜನರ ನಿರ್ಲಕ್ಷ್ಯದಿಂದಾಗಿ ಮುಂಬರುವ ವಾರಗಳಲ್ಲಿ ಪ್ರಕರಣಗಳಲ್ಲಿ ಏರಿಕೆ ಉಂಟಾಗಬಹುದು. ಆಸ್ಪತ್ರೆಗಳ ಮೇಲೆ ಉತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ) ಎಚ್ಚರಿಕೆ ನೀಡಿದೆ.

‘ಜಾಗತಿಕವಾಗಿ ಕೋವಿಡ್‌–19 ಉಲ್ಬಣಗೊಂಡಿದೆ. ವಿಶೇಷವಾಗಿ ಯುರೋಪ್‌ ರಾಷ್ಟ್ರಗಳಲ್ಲಿ ಪ್ರಕರಣಗಳು ಏರುಗತಿಯಲ್ಲಿವೆ.ಆರಂಭದಲ್ಲಿ ಡೆಲ್ಟಾ ತಳಿಯ ಪ್ರಸರಣ ಹೆಚ್ಚಿತ್ತು’ ಎಂದುಡಬ್ಲ್ಯುಎಚ್‌ಓ ಬಿಡುಗಡೆ ಮಾಡಿರುವ ಸಾಂಕ್ರಾಮಿಕ ರೋಗದ ಸಾಪ್ತಾಹಿಕ ವರದಿಯಲ್ಲಿ ಹೇಳಲಾಗಿದೆ.

ಆದರೆ, 2021ರ ಆಗಸ್ಟ್‌ 21ರಲ್ಲಿ ಏರುಗತಿ ಕಂಡಿದ್ದ ಕೋವಿಡ್‌ ಸಾವಿನ ಪ್ರಕರಣಗಳಲ್ಲಿ ಸದ್ಯ ಇಳಿಕೆ ಕಂಡುಬಂದಿದೆ ಎಂದೂ ತಿಳಿಸಿದೆ.

ADVERTISEMENT

‘ಓಮೈಕ್ರಾನ್‌ ತಳಿಯು ಡಬ್ಲ್ಯುಎಚ್‌ಓನ ಎಲ್ಲಾ ಆರು ವಲಯಗಳಲ್ಲಿ ಹರಡಿದೆ. ಇಲ್ಲಿ ಡೆಲ್ಟಾ ತಳಿ ತೀವ್ರತೆ ಕಡಿಮೆಯಾಗಿದೆ. ಆದರೆ, ಓಮೈಕ್ರಾನ್‌ ಹೆಚ್ಚುತ್ತಿದೆ. ಕಳೆದ ವರ್ಷನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಓಮೈಕ್ರಾನ್ ಪ್ರಕರಣಗಳಲ್ಲಿ ಕ್ಷಿಪ್ರ ಏರಿಕೆಯನ್ನು ಕಂಡಿದ್ದ ದೇಶಗಳಲ್ಲಿ ಸದ್ಯ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎಂದು ಹೇಳಿದೆ.

‘ಡಬ್ಲ್ಯುಎಚ್‌ಓನ ಎಲ್ಲಾ ಆರು ವಲಯಗಳಲ್ಲಿ ಈ ವಾರ 1.8 ಕೋಟಿ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ವಾರಕ್ಕೆ ಹೋಲಿಸಿದರೆ ಶೇಕಡ 20ರಷ್ಟು ಹೆಚ್ಚು. ಅಲ್ಲದೆ ಹೊಸಾಗಿ 45,000ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ’ ಎಂದು ಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.