ADVERTISEMENT

ಕ್ಯಾಲಿಫೋರ್ನಿಯಾ ಚರ್ಚ್‌ನಲ್ಲಿ ಗುಂಡಿನ ದಾಳಿ: ಒಂದು ಸಾವು, ನಾಲ್ವರಿಗೆ ಗಂಭೀರ ಗಾಯ

ಏಜೆನ್ಸೀಸ್
Published 16 ಮೇ 2022, 2:44 IST
Last Updated 16 ಮೇ 2022, 2:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಸ್‌ಏಂಜಲೀಸ್‌ (ಅಮೆರಿಕ): ಇಲ್ಲಿಗೆ ಸಮೀಪದ ಲುಗಾನಾ ವುಡ್ಸ್‌ ನಗರದಲ್ಲಿರುವ ಚರ್ಚ್‌ವೊಂದರಲ್ಲಿ ನಡೆದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಒಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಾನೂನು ಜಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಚರ್ಚ್‌ನಲ್ಲಿ ಬೆಳಗ್ಗೆ ಸೇವಾಕಾರ್ಯಗಳು ಮುಗಿದ ಬಳಿಕ ಅನುಯಾಯಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನುಗ್ಗಿದ ಬಂದೂಕುಧಾರಿ ದಾಳಿ ಆರಂಭಿಸಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಚ್‌ಗೆ ನಿರಂತರವಾಗಿ ಭೇಟಿ ನೀಡುವವರು,ಅಧಿಕಾರಿಗಳು ಸ್ಥಳಕ್ಕೆ ಧಾವಿಸುವುದಕ್ಕೂ ಮೊದಲೇ ದಾಳಿಕೋರನನ್ನು ಹಿಡಿದಿದ್ದರು. ಆತನಿಂದಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೆಂಜ್‌ ಕೌಂಟಿಯ ಶೆರಿಫ್‌ ಅವರ ಸಹಾಯಕ ಜೆಫ್ ಹ್ಯಾಲಾಕ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ADVERTISEMENT

ಚರ್ಚ್‌ಗೆ ನಿರಂತರವಾಗಿ ಭೇಟಿ ನೀಡುವವರ ಗುಂಪು ಅಸಾಧಾರಣ ಶೌರ್ಯ ಪ್ರದರ್ಶಿಸಿದೆ. ಸಂಭವಿಸಬಹುದಾಗಿದ್ದ ಹೆಚ್ಚಿನ ಸಾವು–ನೋವುಗಳನ್ನುನಿಸ್ಸಂದೇಹವಾಗಿ ಅವರು ತಡೆದಿದ್ದಾರೆ ಎಂದು ಹ್ಯಾಲಾಕ್‌ ಪ್ರಶಂಸಿಸಿದ್ದಾರೆ.

ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ. ದಾಳಿಕೋರ ಏಷ್ಯಾ ಮೂಲದ 60 ವರ್ಷದ ವ್ಯಕ್ತಿ ಎನ್ನಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ನ್ಯೂಯಾರ್ಕ್‌ನ ಬಫಲೊ ನಗರದ ಸೂಪರ್‌ಮಾರ್ಕೆಟ್‌ನಲ್ಲಿ ಶನಿವಾರವಷ್ಟೇ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿ ನಡೆದಿತ್ತು. 18 ವರ್ಷದ ದುಷ್ಕರ್ಮಿಯೊಬ್ಬ ನಡೆಸಿದ್ದ ಈ ಕೃತ್ಯದಿಂದಾಗಿ ವೇಳೆ 10 ಮಂದಿ ಆಫ್ರಿಕನ್ ಅಮೆರಿಕನ್ನರು ಮೃತಪಟ್ಟಿದ್ದರು.

ಹೂಸ್ಟನ್‌ನ ಜನನಿಬಿಡ ಮಾರ್ಕೆಟ್‌ವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.