ADVERTISEMENT

ಇಥಿಯೋಪಿಯಾದಲ್ಲಿ ಗ್ರೆನೇಡ್ ಸ್ಫೋಟ

ಏಜೆನ್ಸೀಸ್
Published 23 ಜೂನ್ 2018, 16:34 IST
Last Updated 23 ಜೂನ್ 2018, 16:34 IST
ಬಾಂಬ್ ಸ್ಫೋಟದಿಂದ ಗಾಬರಿಗೊಂಡ ಜನರು ಸ್ಥಳದಿಂದ ಓಡಲು ಯತ್ನಿಸಿದರು. –ಎಎಫ್‌ಪಿ ಚಿತ್ರ
ಬಾಂಬ್ ಸ್ಫೋಟದಿಂದ ಗಾಬರಿಗೊಂಡ ಜನರು ಸ್ಥಳದಿಂದ ಓಡಲು ಯತ್ನಿಸಿದರು. –ಎಎಫ್‌ಪಿ ಚಿತ್ರ   

ಆಡಿಸ್ ಅಬಾಬಾ: ಇಥಿಯೋಪಿಯಾ ಪ್ರಧಾನಿ ಅಬಿ ಅಹಮದ್ ಅವರ ಮೊದಲ ಸಾರ್ವಜನಿಕ ರ‍್ಯಾಲಿಯಲ್ಲಿ ಗ್ರೆನೇಡ್ ಸ್ಫೋಟಗೊಂಡು ಒಬ್ಬ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರಾಜಧಾನಿ ಆಡಿಸ್ ಅಬಾಬಾದ ಕೇಂದ್ರ ಭಾಗದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿಸಾವಿರಾರು ಜನರು ಭಾಗಿಯಾಗಿದ್ದರು. ಪ್ರಧಾನಿ ಮಾತು ಮುಗಿಸುತ್ತಿದ್ದಂತೆ ಸ್ಫೋಟ ಸಂಭವಿಸಿತು. ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದರು.

ಪ್ರಧಾನಿ ಸುರಕ್ಷಿತವಾಗಿ ಅಲ್ಲಿಂದ ತೆರಳಿದರು. ಗ್ರೆನೇಡ್ ಎಸೆದ ಗುಂಪಿನಲ್ಲಿದ್ದ ವ್ಯಕ್ತಿ ಪೊಲೀಸ್ ಸಮವಸ್ತ್ರದಲ್ಲಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ADVERTISEMENT

‘ಇದೊಂದು ಸಂಘಟಿತ ದಾಳಿ. ಆದರೆ ಅದು ಯಶಸ್ವಿಯಾಗಿಲ್ಲ. ಸಮಾವೇಶವನ್ನು ದಾರಿತಪ್ಪಿಸಲು ಕೆಲವರು ಈ ಯತ್ನ ಮಾಡಿದ್ದಾರೆ’ ಎಂದು ಅಬಿ ಹೇಳಿದ್ದಾರೆ. ‘ಶಾಂತಿಗೆ ಭಂಗ ತರುವ ಜನರು ಈ ಕೆಲಸ ಮಾಡಿದ್ದಾರೆ. ನೀವು ಇದನ್ನು ಕೈಬಿಡಬೇಕು. ನಿಮ್ಮ ಯತ್ನಗಳು ಹಿಂದೆ ಯಶಸ್ಸು ಕಂಡಿಲ್ಲ. ಮುಂದೆಯೂ ಕಾಣುವುದಿಲ್ಲ’ ಎಂದು ಹೇಳಿದ್ದಾರೆ.

ಆರು ಜನರ ಸ್ಥಿತಿ ಗಂಭೀರವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. ಪ್ರಧಾನಿಯೇ ದಾಳಿಕೋರರ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.