ADVERTISEMENT

ಜಗತ್ತಲ್ಲಿ ನಿರಂಕುಶಾಧಿಕಾರ, ಪ್ರಜಾಪ್ರಭುತ್ವದ ನಡುವೆ ಯುದ್ಧ ನಡೆಯುತ್ತಿದೆ: ಬೈಡನ್

ಪಿಟಿಐ
Published 4 ಮೇ 2022, 1:55 IST
Last Updated 4 ಮೇ 2022, 1:55 IST
   

ವಾಷಿಂಗ್ಟನ್: 21ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂಬಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಜಗತ್ತಿನಲ್ಲಿ ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಯುದ್ಧ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

‘ನಾವು ಈಗ ಐತಿಹಾಸಿಕ ತಿರುವಿನ ಘಟ್ಟದಲ್ಲಿದ್ದೇವೆ. ಇದು ಪ್ರತಿ ಆರು ಅಥವಾ ಎಂಟು ತಲೆಮಾರುಗಳಿಗೆ ಒಮ್ಮೆ ಆಗುತ್ತದೆ. ಅಲ್ಲಿ ವೇಗವಾದ ಬದಲಾವಣೆಯಾಗುವುದರಿಂದ ನಾವು ಅದನ್ನು ನಿಯಂತ್ರಿಸಬೇಕು’ ಎಂದು ಬೈಡನ್ ಮಂಗಳವಾರ ಅಲಬಾಮದ ಲಾಕ್‌ಹೀಡ್‌ನ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸ್ನೇಹಿತರೇ, ಜಗತ್ತಿನಲ್ಲಿ ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಯುದ್ಧ ನಡೆಯುತ್ತಿದೆ. ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರೊಂದಿಗೆ 78 ಗಂಟೆಗಳಿಗೂ ಹೆಚ್ಚು ಕಾಲ ಮುಖತಃ ಮತ್ತು ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವರ ಜೊತೆ ಬೇರೆ ಯಾವುದೇ ವಿಶ್ವ ನಾಯಕರಿಗಿಂತ ಹೆಚ್ಚು ಸಮಯವನ್ನು ಕಳೆದಿದ್ದೇನೆ. 21ನೇ ಶತಮಾನದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ’ ಎಂದು ಬೈಡನ್ ಹೇಳಿದ್ದಾರೆ.

ರಷ್ಯಾದ ಸೇನೆ ವಿರುದ್ಧ ಹೋರಾಡಲು ಉಕ್ರೇನ್‌ಗೆ ತಮ್ಮ ಸೇನೆಯನ್ನು ಕಳುಹಿಸುವ ಮೂಲಕ ಅಮೆರಿಕವು ಮೂರನೇ ಮಹಾಯುದ್ಧದಲ್ಲಿ ತೊಡಗಿಸಿಕೊಳ್ಳದೆ ಉಕ್ರೇನಿಯನ್ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತಿದೆ ಎಂದು ಬೈಡನ್, ಅಮೆರಿಕನ್ನರಿಗೆ ತಿಳಿಸಿದರು.

ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ತಯಾರಿಸುತ್ತಿರುವ ಲಾಕ್ಹೀಡ್, ಉಕ್ರೇನಿಯನ್ನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೆರವು ನೀಡುತ್ತಿದೆ ಎಂದು ಹೇಳಿದರು.

‘ಸ್ಪಷ್ಟವಾಗಿ ಹೇಳುವುದಾದರೆ, ಉಕ್ರೇನ್ ಸೇನೆ ಹಲವು ಕಡೆಗಳಲ್ಲಿ ರಷ್ಯಾದ ಮಿಲಿಟರಿಯನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಅಮೆರಿಕವು ಅವರ ಜೊತೆ ನಿಂತಿರುವುದರಿಂದ ಉಕ್ರೇನ್ ಹೋರಾಟವನ್ನು ಮುಂದುವರಿಸಲು ಮತ್ತು ಈ ಯುದ್ಧದಲ್ಲಿ ರಷ್ಯಾ ಕಾರ್ಯತಂತ್ರದ ವೈಫಲ್ಯ ಸಾಧ್ಯವಾಗಿದೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.