
ಲಾಹೋರ್: ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಬಂಕರ್‌ನಲ್ಲಿ ಅಡಗಿ ಕೂರಲು ಸಲಹೆ ಬಂದಿತ್ತು ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.
ಜರ್ದಾರಿ ಅವರ ಪತ್ನಿ, ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಅವರ ಪುಣ್ಯ ಸ್ಮರಣೆ ಅಂಗವಾಗಿ ಸಿಂಧ್ ಪ್ರಾಂತ್ಯದ ಲರ್ಕಾನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2007ರಲ್ಲಿ ನಡೆದ ಬಾಂಬ್ ಮತ್ತು ಬಂದೂಕು ದಾಳಿಯಲ್ಲಿ ಭುಟ್ಟೊ ಅವರು ಮೃತಪಟ್ಟಿದ್ದಾರೆ.
‘ಸರ್ ಯುದ್ಧ ಆರಂಭವಾಗಿದೆ. ಬಂಕರ್ ಒಳಗೆ ಹೋಗೋಣ’ ಎಂದು ನನ್ನ ಸೇನಾ ಕಾರ್ಯದರ್ಶಿ ಹೇಳಿದರು. ಆಗ ನಾನು, ‘ಸಾವು ಬರುವುದಾದರೆ ಇಲ್ಲಿಗೇ ಬರಲಿ. ನಾಯಕರು ಬಂಕರ್‌ಗಳಲ್ಲಿ ಸಾಯಬಾರದು, ಯುದ್ಧ ಭೂಮಿಯಲ್ಲಿ ಸಾಯಬೇಕು’ ಎಂದು ಹೇಳಿದೆ’ ಎಂದು ವಿವರಿಸಿದರು.
ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಬಳಿಕ ಉಭಯ ದೇಶಗಳ ಮಧ್ಯೆ ನಾಲ್ಕು ದಿನ ತೀವ್ರ ಸಂಘರ್ಷ ಏರ್ಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.