ADVERTISEMENT

ಪರ್ವತಾರೋಹಣಕ್ಕೆ 740 ಮಂದಿಗೆ ಅನುಮತಿ ನೀಡಿದ ನೇಪಾಳ

ಪಿಟಿಐ
Published 19 ಏಪ್ರಿಲ್ 2022, 13:13 IST
Last Updated 19 ಏಪ್ರಿಲ್ 2022, 13:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ದೇಶದ 21 ಪರ್ವತಗಳನ್ನು ಹತ್ತಲು 70 ದೇಶಗಳ 740 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

8,840 ಮೀಟರ್‌ ಎತ್ತರದ ಮೌಂಟ್‌ ಎವರೆಸ್ಟ್‌ ಸೇರಿದಂತೆ ನೇಪಾಳದಲ್ಲಿನ ಪರ್ವತಗಳನ್ನು ಏರಲು ಅನುಮತಿ ಪಡೆದ ಪರ್ವತಾರೋಹಿಗಳಲ್ಲಿ 585 ಪುರುಷರು ಹಾಗೂ 155 ಮಹಿಳೆಯರು ಇದ್ದಾರೆ.

ಅಮೆರಿಕದ 23 ಮಹಿಳೆಯರು ಸೇರಿದಂತೆ 117 ಮಂದಿ ಪರ್ವತಾರೋಹಿಗಳು ಅನುಮತಿ ಪಡೆದಿದ್ದಾರೆ. ಭಾರತದ 55 ಮಂದಿ, ರಷ್ಯಾದ 25 ಮಂದಿ ಹಾಗೂ ಉಕ್ರೇನ್‌ನ ಒಬ್ಬರು ಸಹ ಅನುಮತಿ ಪಡೆದಿದ್ದಾರೆ. ಪರ್ವತಾರೋಹಿಗಳಿಂದ ₹ 39.50 ಕೋಟಿಗೂ ಹೆಚ್ಚು ರಾಯಧನವನ್ನು ಸಂಗ್ರಹಿಸಲಾಗಿದೆ ಎಂದು ಇಲಾಖೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.