ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಲಸಿಕೆ ತಯಾರಿಗೆ ತೊಡಕಾಗಿವೆ ಲಕ್ಷಣ ರಹಿತ ಸೋಂಕು ಪ್ರಕರಣಗಳು

ಪಿಟಿಐ
Published 11 ಜುಲೈ 2020, 9:42 IST
Last Updated 11 ಜುಲೈ 2020, 9:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಸೋಂಕು ದೃಢಪಟ್ಟ ಶೇ 50 ರಿಂದ ಶೇ 60 ವಯಸ್ಕರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಅಲ್ಲಿನ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಹಲವು ಪ್ರಕರಣಗಳು ಗಮನಕ್ಕೆ ಬರುತ್ತಿಲ್ಲ ಎಂದುದಕ್ಷಿಣ ಆಫ್ರಿಕಾದ ಅಂತರರಾಷ್ಟ್ರೀಯ ಲಸಿಕೆ ಪ್ರಯೋಗ ತಂಡದ ಮುಖ್ಯಸ್ಥ ಡಾ.ಶಬೀರ್‌ ಮಾಧಿ ಅವರು ಹೇಳಿದರು.

‘ಲಕ್ಷಣ ರಹಿತ ಪ್ರಕರಣಗಳಿಂದಾಗಿ ಲಸಿಕೆ ಸಿದ್ಧಪಡಿಸಲು ಇನ್ನಷ್ಟು ಕಷ್ಟಕರವಾಗುತ್ತಿದೆ. ಶೇ 80ರಷ್ಟು ಸೋಂಕಿತ ಮಕ್ಕಳಲ್ಲಿ ಯಾವುದೇ ಲಕ್ಷಣಗಳೇ ಇರಲಿಲ್ಲ. ವೈದ್ಯಕೀಯ ಪ್ರಯೋಗಗಳಿಗೆ ಸೋಂಕು ರಹಿತ ಜನರ ಅವಶ್ಯಕತೆ ಇದೆ. ಆದರೆ ಇಲ್ಲಿ ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ. ಹೀಗಿರುವಾಗ ಲಸಿಕೆಯ ಪ್ರಯೋಗ ನಡೆಸುವುದು ಕಷ್ಟಕರ ಎಂದು ಅವರು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ADVERTISEMENT

ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ 2.50 ಲಕ್ಷ ಜನರಿಗೆ ಸೋಂಕು ತಗುಲಿದ್ದು, 3,860 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.