ಆಪರೇಷನ್ ಸಿಂಧೂರ
ಇಸ್ಲಾಮಾಬಾದ್: ಭಾರತ ಕೈಗೊಂಡಿದ್ದ ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ವಿವಿಧ ಪಕ್ಷಗಳ ನಾಯಕರು ನೀಡಿರುವ ಹೇಳಿಕೆಗಳನ್ನು ಪಾಕಿಸ್ತಾನ ಬುಧವಾರ ಖಂಡಿಸಿದೆ.
‘ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುವುದಕ್ಕೆ ಪಾಕಿಸ್ತಾನ ಬದ್ಧವಾಗಿದೆ’ ಎಂದು ವಿದೆಶಾಂಗ ಕಚೇರಿ ಹೇಳಿದೆ.
‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಯಾವುದೇ ವಿಶ್ವಾಸಾರ್ಹ ಅಥವಾ ದೃಢೀಕರಿಸಿದ ಸಾಕ್ಷ್ಯಗಳು ಇಲ್ಲದೆಯೇ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ’ ಎಂದಿದೆ.
‘ಭಾರತದ ನಾಯಕರು ನೀಡಿರುವ ಹೇಳಿಕೆಗಳು ವಾಸ್ತವಿಕ ಸಂಗತಿಗಳನ್ನು ತಿರುಚುವ ಅಪಾಯಕಾರಿ ಪ್ರವೃತ್ತಿಯನ್ನು ತೋರಿಸುತ್ತವೆ. ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರ ಹತ್ಯೆಗಾಗಿ ಭಾರತ ‘ಆಪರೇಷನ್ ಮಹಾದೇವ’ ಕೈಗೊಂಡಿದ್ದು, ಇದು ಕೂಡ ಪಾಕಿಸ್ತಾನದ ಪಾಲಿಗೆ ಮಹತ್ವದ ವಿಚಾರವಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.