ADVERTISEMENT

ಸೆ.12ರವರೆಗೆ ಇಮ್ರಾನ್ ಖಾನ್‌ ಮಧ್ಯಂತರ ಜಾಮೀನು ವಿಸ್ತರಣೆ

ಪಿಟಿಐ
Published 1 ಸೆಪ್ಟೆಂಬರ್ 2022, 13:58 IST
Last Updated 1 ಸೆಪ್ಟೆಂಬರ್ 2022, 13:58 IST
   

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಗುರುವಾರ ಇಲ್ಲಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಸೆ.12ರವರೆಗೆ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿದೆ.

ನ್ಯಾಯಮೂರ್ತಿ ರಾಜಾ ಜವಾದ್‌ ಅಬ್ಬಾಸ್‌ ಹಸನ್‌ ಅವರು ₹1 ಲಕ್ಷ ಭದ್ರತಾ ಖಾತರಿ ಮೇಲೆ ಜಾಮೀನು ಅವಧಿ ವಿಸ್ತರಣೆ ಮಾಡಿದ್ದಾರೆ ಎಂದುಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥರೂ ಆಗಿರುವಇಮ್ರಾನ್‌ ಅವರು ಕಳೆದ ತಿಂಗಳು ನಡೆದ ರ‍್ಯಾಲಿ ವೇಳೆ ಪೊಲೀಸ್‌, ನ್ಯಾಯಾಂಗ ಮತ್ತು ಸರ್ಕಾರದ ಇತರ ಸಂಸ್ಥೆಗಳಿಗೆ ಬೆದರಿಕೆಯೊಡ್ಡಿದ್ದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

ನ್ಯಾಯಾಲಯವು ಆ.25ರಂದು ಇಮ್ರಾನ್‌ಖಾನ್‌ಗೆ ಸೆ.1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.