ADVERTISEMENT

ಸಿಪಿಇಸಿ: ಪ್ರಮುಖ ರೈಲ್ವೆ ಯೋಜನೆಗೆ ಪಾಕ್ ಒಪ್ಪಿಗೆ

ಪಿಟಿಐ
Published 7 ಜೂನ್ 2020, 11:34 IST
Last Updated 7 ಜೂನ್ 2020, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: 7.2 ಬಿಲಿಯನ್ ಯುಎಸ್‌ಡಿ (₹54,000 ಕೋಟಿ) ವೆಚ್ಚದ ಪೇಶಾವರ–ಕರಾಚಿ ನಡುವಿನ ರೈಲ್ವೆ ಮಾರ್ಗ ಮೇಲ್ದರ್ಜೆಗೇರಿಸುವ ಯೋಜನೆಗೆ ಪಾಕಿಸ್ತಾನ ಒಪ್ಪಿಗೆ ನೀಡಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯ ಪ್ರಮುಖ ಭಾಗ ಎಂದು ಪರಿಗಣಿಸಲಾಗಿರುವ ಈ ಕಾಮಗಾರಿಯಲ್ಲಿ1,872 ಕಿಲೋಮೀಟರ್ ಉದ್ದದ ರೈಲ್ವೆ ಹಳಿ ಮೇಲ್ದರ್ಜೆಗೆ ಏರಲಿದೆ ಎಂದು ಪ್ರಾಧಿಕಾರದ ಮುಖ್ಯಸ್ಥ ಅಸೀಮ್ ಸಲೀಮ್ ಬಾಜ್ವಾ ಹೇಳಿದ್ದಾರೆ.

ಸರ್ಕಾರದ ಪ್ರಮುಖ ನೀತಿ ನಿರ್ಧಾರ ಸಮಿತಿ ‘ಸೆಂಟ್ರಲ್ ಡೆವಲಪ್‌ಮೆಂಟ್ ವರ್ಕಿಂಗ್ ಪಾರ್ಟಿ’ಯು (ಸಿಡಿಡಬ್ಲ್ಯುಪಿ) ಯೋಜನೆಯನ್ನು ಅನುಮೋದಿಸಿದ್ದು, ಹಣಕಾಸು ಬೆಂಬಲಕ್ಕಾಗಿ ಚೀನಾದ ಜತೆ ಮಾತುಕತೆ ಕೈಗೊಳ್ಳಲು ಈ ನಿರ್ಧಾರದಿಂದ ಸಾಧ್ಯವಾಗಲಿದೆ. ಐಎಂಎಫ್‌ನಿಂದ ದೊಡ್ಡ ಪ್ರಮಾಣದ ಸಾಲ ಪಡೆಯಲೂ ದಾರಿ ಆಗಿದೆ.

2016ರಲ್ಲೇ ಅನುಮೋದನೆಗಾಗಿ ಸಿಡಿಡಬ್ಲ್ಯುಪಿ ಎದುರು ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ಒಮ್ಮೆ ಈ ಯೋಜನೆ ಪೂರ್ಣಗೊಂಡರೆ, ಪ್ರಯಾಣಿಕ ರೈಲಿನ ವೇಗ ಗಂಟೆಗೆ 65/110ರಿಂದ 160 ಕಿಲೋಮೀಟರ್‌ಗೆ ಹೆಚ್ಚಳವಾಗಲಿದೆ. ಸರಕು ಸಾಗಣೆ ರೈಲಿನ ವೇಗ ಈಗಿರುವ 80 ಕಿ.ಮೀ.ನಿಂದ 120 ಕಿ.ಮೀಗೆ ಹೆಚ್ಚಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.