ADVERTISEMENT

ಪತ್ರಕರ್ತನಿಗೆ ಚಿತ್ರಹಿಂಸೆ: ವರದಿ ಸಲ್ಲಿಸಲು ಪಾಕ್‌ ಕೋರ್ಟ್‌ ಸೂಚನೆ

ಪಿಟಿಐ
Published 18 ಫೆಬ್ರುವರಿ 2022, 15:20 IST
Last Updated 18 ಫೆಬ್ರುವರಿ 2022, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಬಂಧಿತ ಹಿರಿಯಪತ್ರಕರ್ತರೊಬ್ಬರಿಗೆ ಪೊಲೀಸರು ಚಿತ್ರಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇದೇ 21ರೊಳಗೆ ವರದಿ ಸಲ್ಲಿಸುವಂತೆ ಇಲ್ಲಿನ ಹೈಕೋರ್ಟ್‌ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದೆ.

ಟಿವಿ ಟಾಕ್‌ಶೋ ವೊಂದರಲ್ಲಿ ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಸಂವಹನ ಸಚಿವ ಮುರಾದ್‌ ಸಯಿದ್ ನೀಡಿದ ದೂರಿನ ಅನ್ವಯ ಪತ್ರಕರ್ತ ಮೊಹ್ಸಿನ್‌ ಬೇಗ್‌ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ಬಂಧನದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನವೇ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳಿಗೆ ಬೇಗ್‌ ತಿಳಿಸಿದ್ದರು. ಬೇಗ್‌ ಪತ್ನಿ ತಮ್ಮ ಪತಿಯ ಮೇಲಿನ ಭಯೋತ್ಪಾದನೆ ಮತ್ತು ಇತರೆ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಹೈ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಈ ವಿಚಾರ ಬೆಳಕಿಗೆ ಬಂದಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.