ADVERTISEMENT

ವಿದೇಶಿ ಧನ ಸಹಾಯ: ಇಮ್ರಾನ್ ಖಾನ್ ಪಕ್ಷಕ್ಕೆ ಚುನಾವಣಾ ಆಯೋಗ ನೋಟಿಸ್‌

ಪ‍ಕ್ಷದ ನಿಲುವು ತಿಳಿಸಲು ಮಾ. 22ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಪಿಟಿಐ
Published 17 ಮಾರ್ಚ್ 2021, 8:15 IST
Last Updated 17 ಮಾರ್ಚ್ 2021, 8:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ವಿದೇಶದಿಂದ ಧನ ಸಹಾಯ ಪಡೆದಿರುವ ಕುರಿತ ದಾಖಲೆಗಳನ್ನು ರಹಸ್ಯವಾಗಿಟ್ಟಿರುವ ಬಗ್ಗೆ ತಮ್ಮ ನಿಲುವನ್ನು ತಿಳಿಸುವಂತೆ ಪಾಕಿಸ್ತಾನ ಚುನಾವಣಾ ಆಯೋಗವು ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್‌–ಎ ಇನ್ಸಾಫ್‌ ಪಕ್ಷ ಹಾಗೂ ಪಕ್ಷದ ಆಂತರಿಕ ಪರಿಶೀಲನಾ ಸಮಿತಿಗೆ ನೋಟಿಸ್‌ ನೀಡಿದೆ.

ಮಾರ್ಚ್‌ 22ರಂದು ಆಯೋಗದ ಎದುರು ವಿಚಾರಣೆಗೆ ಹಾಜರಾಗಿ, ವಿವರಣೆ ನೀಡುವಂತೆಯೂ ಆಯೋಗ ನೋಟಿಸ್‌ನಲ್ಲಿ ವಿವರಿಸಿದೆ.

ಪಕ್ಷದ ದಾಖಲೆಗಳನ್ನು ರಹಸ್ಯವಾಗಿಡಬೇಕೆಂಬ ಪರಿಶೀಲನಾ ಸಮಿತಿಯ ನಿರ್ಧಾರದ ವಿರುದ್ಧ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಭಿನ್ನಮತೀಯ ನಾಯಕ ಹಾಗೂ ಪಕ್ಷದ ಸಂಸ್ಥಾಪಕ ಸದಸ್ಯ ಅಕ್ಬರ್ ಎಸ್ ಬಾಬರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆ ದೂರು ಆಧರಿಸಿ ಆಯೋಗ ಇಮ್ರಾನ್‌ ಪಕ್ಷಕ್ಕೆ ಮತ್ತು ಸಮಿತಿಗೆ ನೋಟಿಸ್‌ ನೀಡಿದೆ.

ADVERTISEMENT

ನಿವೃತ್ತ ನ್ಯಾಯಮೂರ್ತಿ ಇರ್ಷಾದ್ ಖೈಸರ್ ನೇತೃತ್ವದ ಪಾಕಿಸ್ತಾನದ ತ್ರಿಸದಸ್ಯ ಚುನಾವಣಾ ಆಯೋಗ (ಇಸಿಪಿ) ಈ ದೂರನ್ನು ಆಲಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.